ಆ.17ಕ್ಕೆ ಮತದಾರರ ಕರಡು ಪಟ್ಟಿ ಪ್ರಕಟ | AC Meeting

ಸಾಗರದಲ್ಲಿ ಎಸ್‌ಐಆರ್ ಪ್ರಗತಿ ಕುರಿತು ಎಲ್ಲ ಪಕ್ಷಗಳ ಮುಖಂಡರಿಗೆ ಎಸಿ ವೀರೇಶ್‌ಕುಮಾರ್ ಮಾಹಿತಿ ನೀಡಿದರು. ಡಾ. ಪ್ರತಿಭಾ, ಪ್ರವೀಣ್ ನಾರ್ಂಡಿಸ್, ಕಲಸೆ ಚಂದ್ರಪ್ಪ, ದೇವೇಂದ್ರಪ್ಪ, ಗಣೇಶ್‌ಪ್ರಸಾದ್ ಇತರರಿದ್ದರು.
ಸಾಗರದಲ್ಲಿ ಎಸ್‌ಐಆರ್ ಪ್ರಗತಿ ಕುರಿತು ಎಲ್ಲ ಪಕ್ಷಗಳ ಮುಖಂಡರಿಗೆ ಎಸಿ ವೀರೇಶ್‌ಕುಮಾರ್ ಮಾಹಿತಿ ನೀಡಿದರು. ಡಾ. ಪ್ರತಿಭಾ, ಪ್ರವೀಣ್ ನಾರ್ಂಡಿಸ್, ಕಲಸೆ ಚಂದ್ರಪ್ಪ, ದೇವೇಂದ್ರಪ್ಪ, ಗಣೇಶ್‌ಪ್ರಸಾದ್ ಇತರರಿದ್ದರು.
Published on
ಸಾಗರ: ತಾಲೂಕಿನಲ್ಲಿ 19,851 ತಾತ್ಕಾಲಿಕ ಗೈರು ಮತದಾರರಿದ್ದು, ಅವರು ಗಣತಿ ನಮೂನೆ ಸ್ವೀಕರಿಸಿಲ್ಲ. ಆ.17ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗುವುದು ಎಂದು ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಮಾಹಿತಿ ನೀಡಿದರು.
ಎಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ವಿವಿಧ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿದ ಅವರು, ಸೆ.16ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟುಹೋಗಬಾರದು ಎಂದು ಪರಿಷ್ಕರಣೆ ಸಂದರ್ಭ ಪ್ರಯತ್ನ ನಡೆಸಲಾಗುತ್ತಿದೆ. ಆದರೂ 19851 ಮತದಾರರು ನಮ್ಮ ವ್ಯಾಪ್ತಿಗೆ ಸಿಗುತ್ತಿಲ್ಲ. ಅವರಿಗೆ ಅಗತ್ಯ ಮಾಹಿತಿ ನೀಡಲಾಗಿದೆ. ಕೆಲವರು ಎಸ್‌ಐಆರ್ ಅರ್ಜಿಯನ್ನು ಪಡೆದಿದ್ದು ಅದನ್ನು ವಾಪಸ್ ನೀಡಿಲ್ಲ ಎಂದರು.
ಮತದಾರರ ಅಂತಿಮ ಪಟ್ಟಿಯನ್ನು ಅ.19ಕ್ಕೆ ಪ್ರಕಟಿಸಲಾಗುತ್ತದೆ. ಅಲ್ಲಿಯವರೆಗೆ ಯಾರೂ ಸಹ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಮುಖರು ಮತಪಟ್ಟಿಯಿಂದ ಹೊರಗೆ ಇದ್ದವರನ್ನು ಒಳಗೆ ತರಲು ಸಹಕಾರ ನೀಡಬೇಕು. ಒಬ್ಬರ ಹೆಸರು ಮತ್ತೊಂದು ಬೂತ್‌ನಲ್ಲಿದ್ದರೆ ಅಂಥವರನ್ನು ಹೊರತುಪಡಿಸಿ ಎಲ್ಲರೂ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು
ತಹಸೀಲ್ದಾರ್ ಡಾ. ಪ್ರತಿಭಾ, ಪ್ರವೀಣ್ ನಾರ್ಂಡಿಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಿತ್ಯಾನಂದ ಶೆಟ್ಟಿ, ಕನ್ನಪ್ಪ, ಎಚ್.ಎಲ್.ಶ್ರೀಧರ್, ಬಿಜೆಪಿ ಪ್ರಮುಖರಾದ ದೇವೇಂದ್ರಪ್ಪ, ಗಣೇಶ್‌ಪ್ರಸಾದ್, ಸತೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net