ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕೆಂಬ ನನ್ನ ಕನಸು ನನಸಾಗಿದೆ. ನನಗೆ ಈ ಜಯ ಸಿಗಲು ಇಲಾಖೆಯ ಎಲ್ಲರ ಸಹಕಾರ ಮತ್ತು ಕೋಚ್‌ಗಳ ನಿರಂತರ ತರಬೇತಿ ಕಾರಣ. ಅವಕಾಶ ದೊರೆತಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ. ಬಾಲ್ಯದ ನನ್ನ ಈಜು ಹವ್ಯಾಸದ ಪ್ರತಿಫಲವಾಗಿ ಪ್ರಶಸ್ತಿ ಗೆದ್ದಿದ್ದೇನೆ ಎನ್ನುತ್ತಾರೆ ಡಾ. ರವಿ.