ಭದ್ರಾ ಬಲ ನಾಲೆಯಲ್ಲಿ ನೀರು ನಿಲ್ಲಿಸಬೇಡಿ

ಭದ್ರಾ ಬಲದಂಡೆ ನಾಲೆ ನೀರು ನಿಲ್ಲಿಸದಂತೆ ಒತ್ತಾಯಿಸಿ ನೀರಾವರಿ ಇಲಾಖೆ ಎಇಇ ಶ್ರೀಧರ್‌ಗೆ ನಾಲೆ ಭಾಗದ ರೈತರು ಮನವಿ ಸಲ್ಲಿಸಿದರು. ಯು.ಬಸವರಾಜ್, ಎಚ್.ಎಸ್.ಮಂಜುನಾಥ್, ಮಾರುತಿ ರಾವ್ ಇತರರಿದ್ದರು.
ಭದ್ರಾ ಬಲದಂಡೆ ನಾಲೆ ನೀರು ನಿಲ್ಲಿಸದಂತೆ ಒತ್ತಾಯಿಸಿ ನೀರಾವರಿ ಇಲಾಖೆ ಎಇಇ ಶ್ರೀಧರ್‌ಗೆ ನಾಲೆ ಭಾಗದ ರೈತರು ಮನವಿ ಸಲ್ಲಿಸಿದರು. ಯು.ಬಸವರಾಜ್, ಎಚ್.ಎಸ್.ಮಂಜುನಾಥ್, ಮಾರುತಿ ರಾವ್ ಇತರರಿದ್ದರು.
Published on
ಹೊಳೆಹೊನ್ನೂರು: ಭದ್ರಾ ಬಲದಂಡೆ ನಾಲೆ ನೀರನ್ನು ಈ ತಿಂಗಳ ಕೊನೆವರೆಗೂ ಹರಿಸಬೇಕೆಂದು ಗೋಂದಿ ನಾಲೆ ಅಚ್ಚುಕಟ್ಟು ಭಾಗದ ರೈತರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್‌ಗೆ ಮನವಿ ಸಲ್ಲಿಸಿದರು.
ಗೋಂಧಿ ನಾಲೆಯಲ್ಲಿ ತ್ಯಾಜ್ಯ ತುಂಬಿ ನೀರು ಮುಂದಕ್ಕೆ ಹರಿಯದಂತಾಗಿದೆ. ಎಮ್ಮೆಹಟ್ಟಿ, ಅಗಸನಹಳ್ಳಿ ಸೇರಿ ನಾಲೆಯ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪುವುದಿಲ್ಲ. ಸಮರ್ಪಕ ನೀರು ಪೂರೈಕೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ರೈತ ಮುಖಂಡ ಯಶವಂತ ರಾವ್ ಘೋರ್ಪಡೆ ದೂರಿದರು.
ಅಚ್ಚುಕಟ್ಟು ಭಾಗದ ರೈತರಿಗೆ ನೀರು ನಿಲುಗಡೆ ಮಾಡುವುದನ್ನು ಮೊದಲೇ ತಿಳಿಸದೆ ಏಕಾಏಕಿಯಾಗಿ ಇದೇ ತಿಂಗಳು 20ಕ್ಕೆ ನೀರು ನಿಲುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ದಿಢೀರ್ ನೀರು ನಿಲ್ಲಿಸಿದರೆ ಬೆಳೆಗಳು ಹಾನಿಗೀಡಾಗಲಿವೆ. ಕೂಡಲೇ ನಾಲೆಯನ್ನು ಸ್ವಚ್ಛಮಾಡಿ ಕೊನೇ ಭಾಗದ ರೈತರಿಗೆ ನೀರು ಪಲುಪಿಸಲು ಪ್ರಯತ್ನ ಮಾಡಬೇಕು. ತಿಂಗಳಾಂತ್ಯದ ವರೆಗೆ ನಿಯಮಿತವಾಗಿ ನೀರು ಹರಿಸಬೇಕು. ನಾಲೆಯಲ್ಲಿ ಸಂಪೂರ್ಣ ನೀರು ಬತ್ತಿಹೋಗಿದೆ. ಕೊನೇ ಭಾಗಕ್ಕೆ ನೀರು ತಲುಪುವವರೆಗೆ ನೀರು ನಿಲುಗಡೆ ಮಾಡಲು ಬಿಡುವುದಿಲ್ಲ ಎಂದರು.
ಯು.ಬಸವರಾಜ್, ಎಚ್.ಎಸ್.ಮಂಜುನಾಥ್, ಮಾರುತಿ ರಾವ್, ಕೃಷ್ಣಮೂರ್ತಿ, ರತ್ನಪ್ಪ, ಪರುಶುರಾಮ್, ನಾಗರಾಜ್, ದೇವಪ್ಪ, ಶೇಖರಪ್ಪ, ಹನುಮಂತಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net