ಅರ್ಹ ಮತದಾರರು ಹೊರಗುಳಿಯದಿರಲಿ

ಸೊರಬದ ಉದ್ರಿ ಗ್ರಾಮದ ಮಹಾಶಕ್ತಿ ಕೇಂದ್ರದಲ್ಲಿ ಆಯೋಜಿಸಿದ್ದ ಬೂತ್‌ಮಟ್ಟದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿದರು. ನಾಗರಾಜ್, ನಿರಂಜನ್ ಕುಪ್ಪಗಡ್ಡೆ, ಹಾಲಪ್ಪ ಗೌಡ ಇತರರಿದ್ದರು.
ಸೊರಬದ ಉದ್ರಿ ಗ್ರಾಮದ ಮಹಾಶಕ್ತಿ ಕೇಂದ್ರದಲ್ಲಿ ಆಯೋಜಿಸಿದ್ದ ಬೂತ್‌ಮಟ್ಟದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿದರು. ನಾಗರಾಜ್, ನಿರಂಜನ್ ಕುಪ್ಪಗಡ್ಡೆ, ಹಾಲಪ್ಪ ಗೌಡ ಇತರರಿದ್ದರು.
Published on
ಸೊರಬ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರು ನಿಗಾ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ತಾಲೂಕಿನ ಉದ್ರಿ ಗ್ರಾಮದ ಮಹಾಶಕ್ತಿ ಕೇಂದ್ರದ ವ್ಯಾಪ್ತಿ ಬೂತ್‌ಮಟ್ಟದ ಪ್ರಮುಖರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮುಖಂಡರು ಮಾಡಿಕೊಂಡ ತಪ್ಪಿನಿಂದ ಬಿಜೆಪಿ ಸೋತಿದೆ. ಬೂತ್‌ಮಟ್ಟದಲ್ಲಿ ವ್ಯತ್ಯಾಸ ಸರಿಪಡಿಸಿಕೊಂಡು ಭಿನ್ನಾಭಿಪ್ರಾಯಗಳನ್ನು ಹೊರಗಡೆ ಚರ್ಚಿಸದೆ ಪರಿಹರಿಸಿ ಒಗ್ಗಟ್ಟಾಗಿ ಪಕ್ಷ ಸಂಘಟಿಸಬೇಕು ಎಂದರು.
ಮತದಾನ ಪರಿಷ್ಕರಣೆ ಹಾಗೂ ಭ್ರಷ್ಟಾಚಾರ ವಿರುದ್ಧ ನಡೆಸಿದ ಹೋರಾಟದ ಲವಾಗಿ ಪಶ್ಚಿಮಬಂಗಾಳದಲ್ಲಿ 208 ಸೀಟುಗಳಿಂದ ಗೆಲ್ಲಲು ಸಾಧ್ಯವಾಯಿತು. ಹಿಂದಿನ ಚುನಾವಣೆಗಳಲ್ಲಿ ಅನಧಿಕೃತ ವಲಸಿಗರಿಗೆ ಮತದಾನದ ಹಕ್ಕು ನೀಡಿದ ಪರಿಣಾಮ ಕಡಿಮೆ ಸೀಟು ಗೆದ್ದಿದ್ದೆವು ಎಂದು ತಿಳಿಸಿದರು.
ಮತದಾರರು ಒಂದೇ ಕ್ಷೇತ್ರದಲ್ಲಿ ಮತದಾನದ ಹಕ್ಕು ಚಲಾಯಿಸಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಆಯೋಗ ಎಸ್‌ಐಆರ್ ನಡೆಸುತ್ತಿದೆ. ಬಿಎಲ್‌ಒಗಳು ಪ್ರತಿ ಮನೆಗೆ ಮೂರು ಬಾರಿ ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ಕಾರ್ಯಕರ್ತರು ಜನರಿಗೆ ಮತದಾನ ಪರಿಷ್ಕರಣೆಗೆ ಸಹಕರಿಸಬೇಕು. ಕಾಂಗ್ರೆಸ್ ಹಗರಣಗಳನ್ನು ಬಿಜೆಪಿ ಬಯಲಿಗೆ ತಂದ ಪರಿಣಾಮ ಸರ್ಕಾರದ ಭ್ರಷ್ಟಾಚಾರ ಜನತೆಗೆ ಗೊತ್ತಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ನಿರಂಜನ್ ಕುಪ್ಪಗಡ್ಡೆ, ಉದ್ರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹಾಲಪ್ಪ ಗೌಡ, ಸುರೇಂದ್ರ ಗೌಡ, ಮಧು, ಬೂದ್ಯಪ್ಪ ಗೌಡ, ದರ್ಶನ್, ಹೊಳೆಯಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net