ಡಿ.19ರಿಂದ ಎಳ್ಳಮಾವಾಸ್ಯೆ ಜಾತ್ರೆ ಆರಂಭವಾಗಲಿದೆ. ಜಾತ್ರೆ ಸಂದರ್ಭದಲ್ಲಿ ಇಲಾಖೆಯಿಂದ ಸಿಸಿ ಟಿವಿ ಅಳವಡಿಕೆ ಹಾಗೂ ಮಫ್ತಿಯಲ್ಲಿ ಪೋಲಿಸ್ ಸಿಬ್ಬಂದಿ ಗಸ್ತು ಸೇರಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ ಸರಗಳ್ಳರ ಹಾವಳಿ ಬಗ್ಗೆ ಜನರು ಕೂಡಾ ಅತ್ಯಂತ ಎಚ್ಚರ ವಹಿಸಬೇಕಿದೆ. ಸಣ್ಣ ಮಕ್ಕಳ ಬಗ್ಗೆ ಪಾಲಕರು ಉದಾಸೀನತೆ ತೋರಬಾರದು ಎಂದು ಹೇಳಿದರು. ರಥೋತ್ಸವ ಮತ್ತು ತೆಪ್ಪೋತ್ಸವದ ದಿನದಂದು ಕೆಲವು ಮಾರ್ಗಗಳನ್ನು ಏಕಮುಖ ಸಂಚಾರ ಮಾಡಲಾಗುತ್ತದೆ. 4 ಚಕ್ರದ ವಾಹನಗಳಿಗೆ ಡಾ. ಯು.ಆರ್.ಅನಂತಮೂರ್ತಿ ಕ್ರೀಡಾಂಗಣ, ಸಾರ್ವಜನಿಕ ಕ್ರೀಡಾಂಗಣ ಹಾಗೂ ಕುವೆಂಪು ಶಾಲೆಯ ಹಿಂಭಾಗದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಪಟ್ಟಣದ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್, ಆಗುಂಬೆ ಠಾಣೆ ಪಿಎಸ್ ಐ ಶಿವನಗೌಡ, ಸಿಬ್ಬಂದಿ ಇದ್ದರು.