ಫುಟ್‌ಪಾತ್ ಒತ್ತುವರಿಗೆ ಅವಕಾಶ ಕೊಡಬೇಡಿ | Cleaning work

ಮಾರಿ ಜಾತ್ರೆ ಹಿನ್ನೆಲೆಯಲ್ಲಿ ಸಾಗರದ ಬಿ.ಎಚ್.ರಸ್ತೆಯಲ್ಲಿ ಕೈಗೊಂಡಿದ್ದ ಸ್ವಚ್ಛತಾ ಕಾರ್ಯವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲಿಸಿದರು. ಸುರೇಶ ಬಾಬು, ವಿಲ್ಸನ್ ಗೋನ್ಸಾಲ್ವಿಸ್, ರವಿಕುಮಾರ್ ಇತರರಿದ್ದರು.
ಮಾರಿ ಜಾತ್ರೆ ಹಿನ್ನೆಲೆಯಲ್ಲಿ ಸಾಗರದ ಬಿ.ಎಚ್.ರಸ್ತೆಯಲ್ಲಿ ಕೈಗೊಂಡಿದ್ದ ಸ್ವಚ್ಛತಾ ಕಾರ್ಯವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲಿಸಿದರು. ಸುರೇಶ ಬಾಬು, ವಿಲ್ಸನ್ ಗೋನ್ಸಾಲ್ವಿಸ್, ರವಿಕುಮಾರ್ ಇತರರಿದ್ದರು.
Published on
ಸಾಗರ: ರಸ್ತೆ ಇಕ್ಕೆಲಗಳಲ್ಲಿ ಗೂಡಂಗಡಿಗಳನ್ನು ಇರಿಸಿಕೊಂಡು ನಗರದ ಸೌಂದರ್ಯ ಹಾಳು ಮಾಡಬೇಡಿ. ಮಾರಿ ಜಾತ್ರೆಗೆ ಬರುವ ಪ್ರವಾಸಿಗರಿಗೆ ಊರಿನ ಬಗ್ಗೆ ಅಗೌರವ ಮೂಡುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಬಿ.ಎಚ್.ರಸ್ತೆಯಲ್ಲಿ ಭಾನುವಾರ ಜತ್ರೆ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ಪರಿಶೀಲಿಸಿ ಮಾತನಾಡಿದ ಅವರು, ಬಿ.ಎಚ್.ರಸ್ತೆ ಡಾಂಬರೀಕರಣ ನಡೆಯುತ್ತಿದ್ದು ಫುಟ್‌ಪಾತ್ ಮಾಡಲಾಗಿದೆ. ಅದರ ಮೇಲೆ ವಸ್ತುಗಳನ್ನು ಇಟ್ಟುಕೊಳ್ಳಬೇಡಿ. ನಗರಸಭೆ ಅಧಿಕಾರಿಗಳು ಸಹ ಇದಕ್ಕೆ ಅವಕಾಶ ಕೊಡಬಾರದು ಎಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ರಸ್ತೆ ನಡುವೆ ಡಿವೈಡರ್ ಹಾಕುವುದು ಸ್ವಲ್ಪ ವಿಳಂಬ ಆಗಬಹುದು. ಜಾತ್ರೆ ಇರುವುದರಿಂದ ಕೆಲವು ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ದೇವಸ್ಥಾನಕ್ಕೆ ಸಂಪರ್ಕಿಸುವ ಇತರೆ ಎಲ್ಲ ರಸ್ತೆಗಳ ಕಾಮಗಾರಿ ಮುಗಿಸಲಾಗುತ್ತಿದೆ. ಜತೆಗೆ ಜಾತ್ರೆ ಸಂದರ್ಭ ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ನಗರಸಭೆಗೆ ಸೂಚಿಸಲಾಗಿದೆ ಎಂದರು.
ಉದ್ಯಮಿ ಸಿ.ಜೆ.ರಾಯ್ ನಿಧನ ಬೇಸರ ತರಿಸಿದೆ. ಈ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಅವರ ಆತ್ಯಹತ್ಯೆಗೆ ಕಾರಣ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಕಲಸೆ ಚಂದ್ರಪ್ಪ, ಸುರೇಶ ಬಾಬು, ವಿಲ್ಸನ್ ಗೋನ್ಸಾಲ್ವಿಸ್, ಎಚ್.ಎಂ.ರವಿಕುಮಾರ್, ಗಣಪತಿ ಮಂಡಗಳಲೆ, ರಮೇಶ್, ಪಿಡಬ್ಲುೃಡಿ ಅಭಿಯಂತ ಅನಿಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net