ಜೀವ ರಕ್ಷಣೆಗಾಗಿ ರಕ್ತದಾನ ಮಾಡಿ

ಭದ್ರಾವತಿ ನ್ಯೂಟೌನ್​ ವಿಐಎಸ್​ಎಲ್​ ಆಸ್ಪತ್ರೆಯಲ್ಲಿ ಜೀವ ಸಂಜೀವಿನಿ ಸ್ವಯಂ ಸೇವಾ ರಕ್ತ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಬಿ. ವಿಶ್ವನಾಥ್​,  ರಾಜು, ನರಸಯ್ಯ ಇದ್ದರು.
ಭದ್ರಾವತಿ ನ್ಯೂಟೌನ್​ ವಿಐಎಸ್​ಎಲ್​ ಆಸ್ಪತ್ರೆಯಲ್ಲಿ ಜೀವ ಸಂಜೀವಿನಿ ಸ್ವಯಂ ಸೇವಾ ರಕ್ತ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಬಿ. ವಿಶ್ವನಾಥ್​, ರಾಜು, ನರಸಯ್ಯ ಇದ್ದರು.
Published on
ಭದ್ರಾವತಿ: ಅಮೂಲ್ಯ ಜೀವಗಳನ್ನು ಉಳಿಸಲು ನೌಕರರು ಮತ್ತು ಸಾರ್ವಜನಿಕರು ನಿಯಮಿತವಾಗಿ ರಕ್ತದಾನ ಮಾಡುವಂತೆ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಅನೂಪ್​ಕುಮಾರ್​ ತಿಳಿಸಿದರು.
ನಗರದ ನ್ಯೂಟೌನ್​ ಸೈಲ್​&ವಿಐಎಸ್​ಎಲ್​ ಆಸ್ಪತ್ರೆಯಲ್ಲಿ ಜೀವ ಸಂಜೀವಿನಿ ಸ್ವಯಂ ಸೇವಾ ರಕ್ತ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಾರ್ವಜನಿಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮನುಷ್ಯನ ಅಗತ್ಯತೆಗೆ ಅನುಗುಣವಾಗಿ ರಕ್ತ ಸಿಗದಂತಾಗಿದೆ. ರಕ್ತದ ಅಗತ್ಯತೆ, ಮಹತ್ವ ಅರಿತು 18 ವಯಸ್ಸಿನವರ ಮೇಲ್ಪಟ್ಟು ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು. ನೀವು ಕೊಡುವ ರಕ್ತ ಮೂರು ಜನರ ಜೀವ ಉಳಿಸಲು ನೆರವಾಗುತ್ತದೆ ಎಂದರು.
ಮುಖ್ಯ ಮಹಾಪ್ರಬಂಧಕ (ಮಾನವ ಸಂಪನ್ಮೂಲ) ಬಿ. ವಿಶ್ವನಾಥ್​, ಪ್ರಭಾರ ಮಹಾಪ್ರಬಂಧಕ (ಸ್ಥಾವರ) ಟಿ. ರವಿಚಂದ್ರನ್​, ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಕೆ.ಎಸ್​.ಸುಜಿತ್​ಕುಮಾರ್​, ಕಾರ್ಮಿಕರ ಸಂದ ಅಧ್ಯ ಅಮೃತ್​ಕುಮಾರ್​, ಜೀವ ಸಂಜೀವಿನಿ ಸ್ವಯಂ ಸೇವಾ ರಕ್ತ ಕೇಂದ್ರದ ಆಡಳಿತಾಧಿಕಾರಿ ರಾಜು, ನರಸಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net