ಕಸ್ತೂರಿ ರಂಗನ್ ವರದಿ ಜಾರಿ ಬೇಡ | bike rally

ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಒತ್ತಾಯಿಸಿ ಹಿನ್ನೀರು ಭಾಗದ ಗ್ರಾಮಸ್ಥರು ಕೋಳೂರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಅ.ನಾ.ಚಂದ್ರಶೇಖರ, ಅಶೋಕ್, ಮಂಜಪ್ಪ ಇತರರಿದ್ದರು.
ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಒತ್ತಾಯಿಸಿ ಹಿನ್ನೀರು ಭಾಗದ ಗ್ರಾಮಸ್ಥರು ಕೋಳೂರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಅ.ನಾ.ಚಂದ್ರಶೇಖರ, ಅಶೋಕ್, ಮಂಜಪ್ಪ ಇತರರಿದ್ದರು.
Published on
ಸಾಗರ: ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಶರಾವತಿ ಹಿನ್ನೀರು ಭಾಗದ ಗ್ರಾಮಸ್ಥರು ಹಾಗೂ ರೈತರು ನಮ್ಮ ಭೂಮಿ ನಮ್ಮ ಹಕ್ಕು ಘೋಷವಾಕ್ಯದಡಿ ಸಿಗಂದೂರು ಸೇತುವೆಯಿಂದ ಕೋಳೂರು ಗ್ರಾಮ ಪಂಚಾಯಿತಿವರೆಗೆ ಮಂಗಳವಾರ ಬೈಕ್ ರ‌್ಯಾಲಿ ನಡೆಸಿದರು.
ವರದಿ ಅನುಷ್ಠಾನದಿಂದ ಮಲೆನಾಡು ಭಾಗದಲ್ಲಿ ರೈತರು ತೀವ್ರ ಸಂಕಷ್ಟ ಎದುರಿಸಲಿದ್ದಾರೆ. ಸಾಗರ ತಾಲೂಕಿನ 47 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರುತ್ತದೆ. ಶರಾವತಿ ಹಿನ್ನೀರು ಭಾಗದ ಜನರು ಈಗಾಗಲೇ ಮಡೆನೂರು, ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಸಂದರ್ಭ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ನಿರಾಶ್ರಿತರಾದವರು. ಈ ಕುಟುಂಬಗಳಿಗೆ ಈತನಕ ಭೂಮಿ ಹಕ್ಕು ಸಿಕ್ಕಿಲ್ಲ. ಪರಿಭಾವಿತ ಅರಣ್ಯ, ಸಿಂಗಳೀಕ ಅರಣ್ಯ, ಪರಿಸರ ಸೂಕ್ಷ್ಮ ಪ್ರದೇಶ, ಅಭಯಾರಣ್ಯ ಮತ್ತಿತರ ಕಾಯ್ದೆಗಳನ್ನು ಹೇರಿ ಜನರ ಬದುಕನ್ನು ಕಷ್ಟಕ್ಕೆ ಸಿಲುಕಿಸುವ ಷಡ್ಯಂತ್ರ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಯಾವ ಕಾರಣಕ್ಕೂ ಅನುಷ್ಠಾನ ಮಾಡಬಾರದು ಎಂದು ಒತ್ತಾಯಿಸಿ ಗ್ರಾಪಂಗೆ ಮನವಿ ಸಲ್ಲಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಅ.ನಾ.ಚಂದ್ರಶೇಖರ, ಅಶೋಕ್, ಮಂಜಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net