ರಾಜ್ಯಮಟ್ಟದ ಬಾಕ್ಸಿಂಗ್‌ನಲ್ಲಿ ಜಿಲ್ಲೆಗೆ 10 ಪದಕ | State-level boxing

ರಾಜ್ಯಮಟ್ಟದ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪದಕ ಪಡೆದ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್‌ನ ಕ್ರೀಡಾಪಟುಗಳು. ಡಾ. ಮಂಜೇಗೌಡ, ಸಾಯಿ ಸತೀಶ್, ಶಿವಮೊಗ್ಗ ವಿನೋದ್, ದೇವರಾಜ್ ನಾಯಕ, ರಾಘವೇಂದ್ರ, ಬಾಲರಾಜ್, ವೆಂಕಟೇಶ್, ಆರ್.ಅನೂಪ್, ಶೇಖರ್, ಎಚ್.ಎಲ್.ಶ್ರೇಯಸ್, ಪ್ರೀತಿಶ್ರೀ ಇದ್ದರು.
ರಾಜ್ಯಮಟ್ಟದ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪದಕ ಪಡೆದ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್‌ನ ಕ್ರೀಡಾಪಟುಗಳು. ಡಾ. ಮಂಜೇಗೌಡ, ಸಾಯಿ ಸತೀಶ್, ಶಿವಮೊಗ್ಗ ವಿನೋದ್, ದೇವರಾಜ್ ನಾಯಕ, ರಾಘವೇಂದ್ರ, ಬಾಲರಾಜ್, ವೆಂಕಟೇಶ್, ಆರ್.ಅನೂಪ್, ಶೇಖರ್, ಎಚ್.ಎಲ್.ಶ್ರೇಯಸ್, ಪ್ರೀತಿಶ್ರೀ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿ ನಡೆದ ಎರಡು ದಿನದ ರಾಜ್ಯಮಟ್ಟದ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್
  • 10 ಪದಕ ಪಡೆದ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್‌ನ ಕ್ರೀಡಾಪಟುಗಳು
  • ಶಿವಮೊಗ್ಗ ಜಿಲ್ಲೆಯಿಂದ ರಾಷ್ಟ್ರಮಟ್ಟದಲ್ಲಿ ಭಾಗವಹಿಸುತ್ತಿರುವ ಮೊದಲ ಬಾಕ್ಸರ್ ಶ್ರೀನಿವಾಸ್
ಶಿವಮೊಗ್ಗ: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್  ಅಸೋಸಿಯೇಷನ್ ಸಹಯೋಗದಲ್ಲಿ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡು ದಿನದ ರಾಜ್ಯಮಟ್ಟದ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್(boxing) ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್‌ನ ಕ್ರೀಡಾಪಟುಗಳು 10 ಪದಕಗಳನ್ನು ಪಡೆದಿದ್ದಾರೆ.
ಯೂತ್ ವಿಭಾಗ(Youth Division)ದಲ್ಲಿ ಸುಧಾ ಕಲ್ಲಿಮನೆ (70-75 ಕೆಜಿ) ಚಿನ್ನ, ವಿ.ಪೂರ್ಣಿಮಾ (70-75 ಕೆಜಿ) ಬೆಳ್ಳಿ, ಎಚ್.ಸ್ವಾತಿ (45-48 ಕೆಜಿ) ಕಂಚು, ಕೆ.ವಿ.ಅಕ್ಷರ (65-70 ಕೆಜಿ) ಕಂಚು, ಹರ್ಷ ಎಸ್ ಗೌಡ (80-85 ಕೆಜಿ) ಬೆಳ್ಳಿ, ನಿಹಾರಿಕಾ ಎನ್ ಉಪಾಧ್ಯ (80+ ಕೆಜಿ) ಬೆಳ್ಳಿ, ಡಿ.ಜೆ.ಪ್ರಿಯಾಂಕಾ (55-60 ಕೆಜಿ) ಬೆಳ್ಳಿ ಪಡೆದಿದ್ದಾರೆ.
ಜೂನಿಯರ್ ವಿಭಾಗ(Junior Division)ದಲ್ಲಿ ಎಚ್.ಡಿ.ಚಿನ್ಮಯ್ (57-60 ಕೆಜಿ) ಚಿನ್ನ, ಆರ್.ಶ್ರೀನಿವಾಸ (50-52 ಕೆಜಿ) ಚಿನ್ನ, ಎಂ.ಬಿ.ಗಾನವಿ (52-54 ಕೆಜಿ) ಬೆಳ್ಳಿ ಪಡೆದಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಮುಖ್ಯ ಕೋಚ್ ಮೀನಾಕ್ಷಿ ಮತ್ತು ಜೂನಿಯರ್ ಕೋಚ್ ಕಾವ್ಯಾ ತರಬೇತಿ ನೀಡಿದ್ದಾರೆ. 
ಯುತ್ ವಿಭಾಗದ ಸುಧಾ ಏ.14ರಂದು ಅಸ್ಸಾಂ(Assam)ನಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಚಿನ್ಮಯಿ ಮತ್ತು ಶ್ರೀನಿವಾಸ್ ಏ.5ರಂದು ಮಹಾರಾಷ್ಟ್ರ(Maharashtra)ದಲ್ಲಿ ನಡೆಯುವ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಶ್ರೀನಿವಾಸ್ ಶಿವಮೊಗ್ಗ ಜಿಲ್ಲೆಯಿಂದ ರಾಷ್ಟ್ರಮಟ್ಟದಲ್ಲಿ ಭಾಗವಹಿಸುತ್ತಿರುವ ಮೊದಲ ಬಾಕ್ಸರ್ ಆಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net