ಸಾಗರ: ಲಯನ್ಸ್ ಸಂಸ್ಥೆಯಿಂದ ಮೇ 18ರಂದು ಬೆಳಗ್ಗೆ 11ಕ್ಕೆ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 167 ಅಂಗವಿಕಲ ಫಲಾನುಭವಿಗಳಿಗೆ ಸಾಧನಾ ಸಲಕರಣೆ ವಿತರಿಸಲಾಗುವುದು ಎಂದು ಸಾಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಟಿ.ಪ್ರಸನ್ನ ಹೇಳಿದರು.
ಲಯನ್ಸ್ ಭವನದಲ್ಲಿ ಇತ್ತೀಚೆಗೆ ನೋಂದಣಿ ಮತ್ತು ಮೌಲ್ಯಮಾಪನ ಕಾರ್ಯಕ್ರಮ ನಡೆಸಿ 253 ಫಲಾನುಭವಿಗಳ ತಪಾಸಣೆ ಮಾಡಲಾಗಿತ್ತು. ಈ ಪೈಕಿ ಅಂತಿಮವಾಗಿ ಭಾರತ ಸರ್ಕಾರದ ಸಿಆರ್‌ಸಿಎಸ್‌ಬಿ ತಂಡ 167 ಜನರನ್ನು ಆಯ್ಕೆ ಮಾಡಿದ್ದು, 1.27 ಕೋಟಿ ರೂ. ವೆಚ್ಚದ ಸಾಧನಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ MLA ಗೋಪಾಲಕೃಷ್ಣ ಬೇಳೂರು ಉದ್ಘಾಟಿಸುವರು. MP ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಾಧನಾ ಸಲಕರಣೆ ವಿತರಿಸುವರು. ಲಯನ್ಸ್ ಸಂಸ್ಥೆಯ ( LIONS CLUB ) ಅಶ್ವಿನಿಕುಮಾರ್ ದಿಕ್ಸೂಚಿ ಭಾಷಣ ಮಾಡುವರು. ಮಾಜಿ ಸಚಿವ ಹರತಾಳು ಹಾಲಪ್ಪ, ಎಂಎಲ್‌ಸಿ ಬಲ್ಕೀಶ್ ಬಾನು ಡಿ.ಎಸ್.ಅರುಣ್, ಟಿ.ಡಿ.ಮೇಘರಾಜ್, ಸ್ವಪ್ನಾ ಸುರೇಶ್ ಮತ್ತಿತರರು ಭಾಗವಹಿಸುವರು ಎಂದರು.
ಅಂಗವಿಕಲರಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಮೇ 18ರಂದು ಬೆಳಗ್ಗೆ 8ರಿಂದ 11ರವರೆಗೆ ಮತ್ತೊಮ್ಮೆ ನೋಂದಣಿ ಹಾಗೂ ಮೌಲ್ಯಮಾಪನ ಕಾರ್ಯಕ್ರಮ ಆಯೋಜಿಸಿದೆ. ಇಲಾಖೆಯಿಂದ ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯಗಳನ್ನು ತಲುಪಿಸಲು ಹಿರಿಯ ನಾಗರಿಕರ ನೋಂದಣಿ REGISTRATION ಸಹ ಹಮ್ಮಿಕೊಳ್ಳಲಾಗಿದೆ. ನೋಂದಣಿಯಲ್ಲಿ ಪಾಲ್ಗೊಳ್ಳುವವರು ಆಧಾರ್ ಕಾರ್ಡ್, ಭಾವಚಿತ್ರ, ಹಿರಿಯ ನಾಗರಿಕರ ಕಾರ್ಡ್ ಜತೆ ಆಗಮಿಸಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.