ಸೊರಬ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಗಳು ಹಾಗೂ ಸಮಾಜಮುಖಿ ಚಿಂತನೆ ಸಮಾಜಕ್ಕೆ ಮಾದರಿ. ಧರ್ಮ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ತಹಸೀಲ್ದಾರ್ ಮಂಜುಳಾ ಹೆಗಡಾಳ್ ಹೇಳಿದರು.
ಪಟ್ಟಣದ ಶ್ರೀ ರೇಣುಕಾ ಸಭಾ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಟಕ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಗಳ ಒಕ್ಕೂಟ ವಿವಿಧ ಸಂ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಸಾಮೂಹಿಕವಾಗಿ ಹಮ್ಮಿಕೊಳ್ಳುವುದರಿಂದ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಲು ಸಾಧ್ಯ ಎಂದರು.
ಜಡೆ ಹಿರೇಮಠದ ಶ್ರೀ ನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನ ಬದುಕಿಗೆ ಭಗವಂತನ ನಾಮಸ್ಮರಣೆ ಬಹುಮುಖ್ಯ. ಭೂಮಿಯಲ್ಲಿ ಬೀಜವನ್ನು ಬಿತ್ತಿದಾಗ ಅದು ವಿವಿಧ ರೂಪಾಂತರ ಹೊಂದಿ ಬೆಳೆಯುವಂತೆಯೇ ಮನುಷ್ಯನ ಮನಸ್ಸಿನಲ್ಲೂ ನೂರಾರು ಭಾವನೆ, ಆಲೋಚನೆಗಳು ಮೂಡುತ್ತವೆ. ಭಗವಂತನ ಸ್ಮರಣೆ, ಆರಾಧನೆ ಮಾಡಿದಾಗ ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಮಾತನಾಡಿ, ಸಮಾಜದಲ್ಲಿ ಕುಟುಂಬಗಳ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ಸಹಾಯ ಮಾಡುವ ಮೂಲಕ ವಿವಿಧ ರೀತಿಯ ಚಟುವಟಿಕೆಗಳನ್ನು ಮಾಡುತ್ತಾ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯ ಮಧುರಾಯ್ ಜಿ. ಶೇಟ್, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯ ಕಾಳಿಂಗರಾಜ್, ಸಮಾಜ ಸೇವಕ ರಾಜು, ಗುರು, ಕೆರಿಯಪ್ಪ, ಏಳು ಒಕ್ಕೂಟಗಳ ಸದಸ್ಯರು ಇದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಟುಂಬಗಳ ಆರ್ಥಿಕ ಚಟುವಟಿಕೆಗಳಿಗೆ ಸಹಾಯ ಮಾಡುವ, ಶಕ್ತಿ ತುಂಬುವ ವ್ಯವಸ್ಥೆ. ಸತ್ಯನಾರಾಯಣ ಪೂಜೆ ಆಯೋಜಿಸುವುದರಿಂದ ಜನರಲ್ಲಿ ಭಕ್ತಿ ಭಾವನೆ, ಧರ್ಮ ಶ್ರದ್ಧೆ ಬೆಳೆಯುತ್ತದೆ. ಧರ್ಮಸ್ಥಳ ೇತ್ರ ಜೀವನದ ಪಾಠಶಾಲೆ. ಸಮಾಜದಲ್ಲಿ ಒಗ್ಗಟ್ಟಿನ ಸಂದೇಶ ಸಾರುತ್ತಿದೆ.