ದೇವರು, ಧರ್ಮದ ಬಗ್ಗೆ ಶ್ರದ್ಧೆ ಅಗತ್ಯ

ಶಿರಾಳಕೊಪ್ಪದಲ್ಲಿ ದೈವ ಬ್ರಾಹ್ಮಣ ಸಮಾಜದಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಶಂಕರ್​ ಬಾಬು, ಎಂ.ಆರ್​.ರಾವೇಂದ್ರ, ವಿಷ್ಣು ರಾಯ್ಕರ್​ ಇತರರಿದ್ದರು.
ಶಿರಾಳಕೊಪ್ಪದಲ್ಲಿ ದೈವ ಬ್ರಾಹ್ಮಣ ಸಮಾಜದಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಶಂಕರ್​ ಬಾಬು, ಎಂ.ಆರ್​.ರಾವೇಂದ್ರ, ವಿಷ್ಣು ರಾಯ್ಕರ್​ ಇತರರಿದ್ದರು.
Published on
ಶಿರಾಳಕೊಪ್ಪ: ಸಮಾಜದಲ್ಲಿ ಒಗ್ಗಟ್ಟು, ಪರಸ್ಪರ ಪ್ರೀತಿ ಹಾಗೂ ವಿಶ್ವಾಸ ಅತ್ಯಂತ ಅಗತ್ಯ. ಹಿರಿಯರನ್ನು ಗೌರವಿಸುವ ಸಂಸ್ಕಾರ ಮುಂದಿನ ತಲೆಮಾರಿಗೆ ವರ್ಗಾವಣೆಯಾಗಬೇಕು ಎಂದು ಕರ್ಕಿ ಮಠದ ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ದೈವ ಬ್ರಾಹ್ಮಣ ಸಮಾಜದಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇವರು, ಧರ್ಮದ ಬಗ್ಗೆ ಭಕ್ತಿ ಹಾಗೂ ಶ್ರದ್ಧೆ ಹೊಂದಿರಬೇಕು. ಕರ್ಕಿಯಲ್ಲಿರುವ ದೈವರ ಮಠ ಹಾಗೂ ಜ್ಞಾನೇಶ್ವರಿ ದೇವಸ್ಥಾನಕ್ಕೆ ವರ್ಷಕ್ಕೆ ಕನಿಷ್ಟ ಒಂದು ಬಾರಿಯಾದರೂ ಭಕ್ತರು ಭೇಟಿ ನೀಡಬೇಕು ಎಂದರು.
ಸರ್ವೇ ಜನಾ@ ಸುಖಿನೋ ಭವಂತು ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಹಾನುಭೂತಿ ನೆಲೆಸಬೇಕು. ಎಲ್ಲ ಭಕ್ತರು ಸದಾ ಮಠಕ್ಕೆ ಬಂದು ದರ್ಶನ ಪಡೆಯುವುದು ಸಾಧ್ಯವಿಲ್ಲ. ಆದ್ದರಿಂದ ನಾವೇ ಭಕ್ತರ ಬಳಿಗೆ ಬಂದು ಆಶೀರ್ವಚನ ನೀಡುತ್ತಿದ್ದೇವೆ. ಮಕ್ಕಳಿಗೆ ಸನ್ಮಾರ್ಗ ತೋರಿಸುವ ಹೊಣೆ ಹಿರಿಯರ ಮೇಲಿದೆ. ಜಾತಿ ತಾರತಮ್ಯ ಮರೆತು, ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಬೇಕು ಎಂದರು.
ದೈವ ಬ್ರಾಹ್ಮಣ ಸಮಾಜದ ಅಧ್ಯ ಶಂಕರ್​ ಬಾಬು, ಕಾರ್ಯದರ್ಶಿ ಎಂ.ಆರ್​.ರಾವೇಂದ್ರ, ಉಪಾಧ್ಯ ವಿಷ್ಣು ರಾಯ್ಕರ್​ ಇತರರಿದ್ದರು. ಪಾಂಡುರಂಗ ಜನ್ನು ಮತ್ತು ಡಿ.ಈಶ್ವರ್​ ಕುಟುಂಬದಿಂದ ಪಾದಪೂಜೆ ನೆರವೇರಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net