ಭಕ್ತನಿಂದಲೇ ಮಠದ ಚಿನ್ನ ಕಳವು | theft case

ಉತ್ತರಾದಿ ಮಠದಲ್ಲಿ ಕಳವು ಮಾಡಿದ್ದ ಆರೋಪಿಯಿಂದ ವಶಪಡಿಸಿಕೊಳ್ಳಲಾದ ಚಿನ್ನದ ವಸ್ತುಗಳು.
ಉತ್ತರಾದಿ ಮಠದಲ್ಲಿ ಕಳವು ಮಾಡಿದ್ದ ಆರೋಪಿಯಿಂದ ವಶಪಡಿಸಿಕೊಳ್ಳಲಾದ ಚಿನ್ನದ ವಸ್ತುಗಳು.
Published on
ತೀರ್ಥಹಳ್ಳಿ: ತಾಲೂಕಿನ ಮಹಿಷಿಯಲ್ಲಿರುವ ಉತ್ತರಾದಿ ಮಠದಲ್ಲಿ ಬುಧವಾರ ನಡೆದ ಕಳ್ಳತನದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಶಿವಮೊಗ್ಗದ ಗಾಂಧಿನಗರ ನಿವಾಸಿ, ಮಠದ ಭಕ್ತನೂ ಆಗಿದ್ದ ರಾಘವೇಂದ್ರ ಆಚಾರ್ಯ ಬಂಧಿತ ಆರೋಪಿ. ಅಂದಾಜು 1.40 ಕೋಟಿ ರೂ. ಮೌಲ್ಯದ 780 ಗ್ರಾಂ ತೂಕದ 16 ಹಲಗಾರತಿಗಳನ್ನು ವಶಪಡಿಸಿಕೊಳ್ಳಲಾಗಿದೆ.  ಮಠದಲ್ಲಿ ಮೂರು ದಿನಗಳಿಂದ ಗುರುವಂದನೆ ಕಾರ್ಯಕ್ರಮ ನಡೆಯುತ್ತಿದ್ದು, ಪೂಜೆ ಸಂದರ್ಭದಲ್ಲಿ ಆರೋಪಿ ಸ್ನಾನದ ನೆಪದಲ್ಲಿ ಕದ್ದ ವಸ್ತುಗಳನ್ನು ನದಿದಡದಲ್ಲಿ ಹೂತಿಟ್ಟಿದ್ದ. ಮಠದಲ್ಲಿದ್ದ ಸುಮಾರು 300 ಜನರನ್ನೂ ಪೊಲೀಸರು ತನಿಖೆ ಮಾಡುವ ವೇಳೆ ಅನುಮಾನ ಬಂದು ಆರೋಪಿಯನ್ನು ವಿಚಾರಿಸಿದ ವೇಳೆ ಬಾಯಿಬಿಟ್ಟಿದ್ದಾನೆ. ಎಸ್ಪಿ ಬಿ.ನಿಖಿಲ್ ನೇತೃತ್ವದಲ್ಲಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ತೀರ್ಥಹಳ್ಳಿ ಠಾಣೆ ಪಿಐ ಇಮ್ರಾನ್ ಬೇಗ್, ಗ್ರಾಮಾಂತರ ಸಿಪಿಐ ರಾಜಶೇಖರ್, ಮಾಳೂರು ಪಿಎಸ್‌ಐ ಸುನಿಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net