ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ

ಸಾಗರದಲ್ಲಿ ಆಯೋಜಿಸಿದ್ದ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮವನ್ನು ತಹಸೀಲ್ದಾರ್ ಡಾ. ಆರ್.ಪ್ರತಿಭಾ ಉದ್ಘಾಟಿಸಿದರು. ಜಿ.ಸಣ್ಣಹನುಮಪ್ಪ, ಸತ್ಯನಾರಾಯಣ ಖಂಡಿಕಾ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮವನ್ನು ತಹಸೀಲ್ದಾರ್ ಡಾ. ಆರ್.ಪ್ರತಿಭಾ ಉದ್ಘಾಟಿಸಿದರು. ಜಿ.ಸಣ್ಣಹನುಮಪ್ಪ, ಸತ್ಯನಾರಾಯಣ ಖಂಡಿಕಾ ಇತರರಿದ್ದರು.
Published on
ಸಾಗರ: ಯುವಜನರು ಮೊಬೈಲ್ ಬಿಟ್ಟು ಸಾಹಿತ್ಯ ಪುಸ್ತಕಗಳನ್ನು ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಧುನಿಕ ಸಂಗೀತದ ಬದಲಾಗಿ ಜನಪದ ಗೀತೆಗಳನ್ನು ಆಲಿಸಬೇಕು ಎಂದು ತಹಸೀಲ್ದಾರ್ ಡಾ. ಆರ್.ಪ್ರತಿಭಾ ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಆಯೋಜಿಸಿದ್ದ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜಾನಪದವನ್ನು ರಕ್ಷಿಸುವ ಅಗತ್ಯವಿದೆ. ಜಾನಪದ ಕಲೆಗಳನ್ನು ಆಶಾದಾಯಕ ದೃಷ್ಟಿಯಿಂದ ನೋಡಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ ಮಾತನಾಡಿ, ಸಾಹಿತ್ಯದ ಮೂಲಬೇರು ಜಾನಪದವಾಗಿದೆ. ಎಲ್ಲ ಸಾಹಿತ್ಯಗಳಿಗೂ ತಾಯಿಬೇರಾದ ಜಾನಪದವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಜಾನಪದವನ್ನು ಜೀವನಪದವಾಗಿ ಉಳಿಸಿಕೊಂಡು ಬಂದವರು ನಮ್ಮ ಜನಪದೀಯರು. ಪ್ರತಿಯೊಂದು ಜಾನಪದ ಗೀತೆಯಲ್ಲೂ ಬದುಕಿನ ಸತ್ಯ ಅಡಗಿದೆ ಎಂದರು.
ಪರಿಷತ್ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಖಂಡಿಕಾ ಮಾತನಾಡಿ, ಜನಪದೀಯರದು ಆದರ್ಶಮಯ ಬದುಕು. ನುಡಿದಂತೆ ನಡೆಯುವ ಜತೆಗೆ ಬದುಕಿನ ಸತ್ಯಗಳು, ಪರಿಸರ, ಆಚರಣೆ ಇನ್ನಿತರ ಗೀತೆಗಳ ಮೂಲಕ ಸಮೂಹ ಜಾಗೃತಿಗೆ ಪ್ರಯತ್ನ ನಡೆಸಿದವರು ಎಂದು ತಿಳಿಸಿದರು.
ಡಾ. ಆರ್.ಪ್ರತಿಭಾ, ಡಾ. ಜಿ.ಸಣ್ಣಹನುಮಪ್ಪ, ಸುರೇಶ್ ಸಹಾನೆ ಅವರನ್ನು ಸನ್ಮಾನಿಸಲಾಯಿತು. ಡಾ. ಅನ್ನಪೂರ್ಣಾ, ದಿನೇಶ್ ಬರದವಳ್ಳಿ, ನಾರಾಯಣಪ್ಪ, ಭಾಗೀರಥಿ, ಪ್ರಭಾವತಿ ವೆಂಕಟೇಶ್, ನಾರಾಯಣಮೂರ್ತಿ ಕಾನುಗೋಡು, ರಾಜು ಜನ್ನೆಹಕ್ಲು, ಕೆ.ಎಲ್.ರೂಪಾ, ನಾರಾಯಣಪ್ಪ ಕುಗ್ವೆ, ಎಸ್.ಬಸವರಾಜ್, ನಾಗರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net