ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸಿ

ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಸ್ವರಚಿತ ಕವನ ವಾಚನ ಕಾರ್ಯಕ್ರಮದದಲ್ಲಿ ಡಾ. ಸರ್ಫ್ರರಾಜ್ ಚಂದ್ರಗುತ್ತಿ ಮಾತನಾಡಿದರು. ಡಾ. ಕೆ.ಜಿ.ವೆಂಕಟೇಶ್, ಗೋಪಿಕಾ, ತ.ಮ.ನರಸಿಂಹ ಇತರರಿದ್ದರು.
ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಸ್ವರಚಿತ ಕವನ ವಾಚನ ಕಾರ್ಯಕ್ರಮದದಲ್ಲಿ ಡಾ. ಸರ್ಫ್ರರಾಜ್ ಚಂದ್ರಗುತ್ತಿ ಮಾತನಾಡಿದರು. ಡಾ. ಕೆ.ಜಿ.ವೆಂಕಟೇಶ್, ಗೋಪಿಕಾ, ತ.ಮ.ನರಸಿಂಹ ಇತರರಿದ್ದರು.
Published on
ರಿಪ್ಪನ್‌ಪೇಟೆ: ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕವನ ವಾಚನ ಕಮ್ಮಟಗಳು ಸಹಕಾರಿ ಎಂದು ನಿವೃತ್ತ ಪ್ರಾಧ್ಯಾಪಕ ಕೆ.ಜಿ.ವೆಂಕಟೇಶ್ ಹೇಳಿದರು.
ಪಟ್ಟಣದಲ್ಲಿ ಕಸಾಪ ಹೋಬಳಿ ಘಟಕ, ಕಲಾ ಕೌಸ್ತುಭ ಕನ್ನಡ ಸಂಘ ಹಾಗೂ ನಾಥ್ ಬಳಗದಿಂದ ಆಯೋಜಿಸಿದ್ದ ಸ್ವರಚಿತ ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಿಪ್ಪನ್‌ಪೇಟೆ ಚಾರಿತ್ರಿಕ ಇತಿಹಾಸ ಹೊಂದಿರುವ ಪಟ್ಟಣ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತಗಳಲ್ಲಿ ಕ್ರಿಯಾಶೀಲವಾಗಿರುವ ಹಿರಿಮೆ ಹೊಂದಿದೆ ಎಂದು ತಿಳಿಸಿದರು.
ಹಿರಿಯರು ಹಾಗೂ ಕಿರಿಯರು ಕವನ ವಾಚಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ. ಸರ್ಫ್ರರಾಜ್ ಚಂದ್ರಗುತ್ತಿ, ಗೋಪಿಕಾ ತೀರ್ಪುಗಾರರಾಗಿ ಆಗಮಿಸಿದ್ದರು. ತ.ಮ.ನರಸಿಂಹ, ಪದ್ಮಾ ಸುರೇಶ್, ಎಂ.ಎಂ.ಪರಮೇಶ್, ಮುರಳಿ, ವರ್ತೇಶ್, ರಾಜರಾಮ್ ಬಾಳಿಗ, ರಾ.ಸೋಮಶೇಖರ, ಜಗದೀಶ್, ಸುರೇಶ್ ಸಿಂಗ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net