ದೇವರಾಜ ಅರಸು ಆಡಳಿತ ಮಾದರಿ | Devaraj Urs birthday

ಸಾಗರದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ವೀರೇಶ್‌ಕುಮಾರ್, ಡಾ. ಪ್ರತಿಭಾ ಮತ್ತಿತರರು ಉದ್ಘಾಟಿಸಿದರು. ಎಚ್.ಕೆ.ನಾಗಪ್ಪ, ಡಾ. ಮೂಕಪ್ಪ ನಾಯ್ಕ್, ಡಾ. ಅನ್ನಪೂರ್ಣಾ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ವೀರೇಶ್‌ಕುಮಾರ್, ಡಾ. ಪ್ರತಿಭಾ ಮತ್ತಿತರರು ಉದ್ಘಾಟಿಸಿದರು. ಎಚ್.ಕೆ.ನಾಗಪ್ಪ, ಡಾ. ಮೂಕಪ್ಪ ನಾಯ್ಕ್, ಡಾ. ಅನ್ನಪೂರ್ಣಾ ಇತರರಿದ್ದರು.
Published on
ಸಾಗರ: ಮೂರು ದಶಕಗಳ ಕಾಲ ಶಾಸಕ, ಸಚಿವ, ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರು ಕಾರ್ಯನಿರ್ವಹಿಸಿದ್ದಾರೆ. ಓರ್ವ ಶ್ರೇಷ್ಠ ನಾಯಕನ ಕೈನಲ್ಲಿ ಅಧಿಕಾರ ಸಿಕ್ಕರೆ ಯಾವ ರೀತಿ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಅವರು ನೀಡಿದ ಆಡಳಿತವೇ ಸಾಕ್ಷಿ ಎಂದು ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಬಣ್ಣಿಸಿದರು.
ಸಾಗರದಲ್ಲಿ ಗುರುವಾರ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಡಿ. ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಯಾಗಿ ಅತ್ಯಂತ ಪರಿಣಾಮಕಾರಿ ಆಡಳಿತ ನೀಡಿದ ಅರಸು ಅವರು ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು. ಉಳುವವನೇ ಭೂ ಒಡೆಯ, ಜೀತದಾಳು ಪದ್ಧತಿ ನಿರ್ಮೂಲನೆ, ಮಲಹೊರುವ ಪದ್ಧತಿ ನಿಷೇಧ ಮತ್ತಿತರ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕುವಲ್ಲಿ ಅರಸು ಅವರ ಪಾತ್ರ ಪ್ರಮುಖ. ಇಂದಿನ ಯುವ ರಾಜಕಾರಣಿಗಳು ಅರಸು ಅವರ ಆಡಳಿತವನ್ನು ಅನುಸರಿಸಬೇಕು ಎಂದರು.
ತಹಸೀಲ್ದಾರ್ ಡಾ. ಆರ್.ಪ್ರತಿಭಾ ಮಾತನಾಡಿ, ಹಿಂದುಳಿದ ವರ್ಗಗಳ ಧ್ವನಿಯಾಗಿ ಅರಸು ಸದಾ ಸ್ಮರಣೀಯ. ಅವರ ಆಡಳಿತ ಸುಧಾರಣೆ ವಿಧಾನಗಳು ರಾಜಕೀಯ ನಾಯಕರಿಗೆ ಮೇಲ್ಪಂಕ್ತಿಯಾಗಿ ಉಳಿದುಕೊಂಡಿವೆ. ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ಅರಸು ಕುರಿತು ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಕೆ.ಮೂಕಪ್ಪ ನಾಯ್ಕ್ ಮಾತನಾಡಿ, ದೇವರಾಜ ಅರಸು ನಾಡಿನ ರಾಜಕೀಯ ಶಕ್ತಿಯಾಗಿದ್ದರು. ರಾಜಕಾರಣಿ ಮಾತ್ರವಲ್ಲದೆ, ಸಾಮಾಜಿಕ ಬದಲಾವಣೆಯ ಶಕ್ತಿಯಾಗಿದ್ದರು ಎಂದು ತಿಳಿಸಿದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ್‌ಕುಮಾರ್, ಶಿವಪ್ರಕಾಶ್, ಡಾ. ಅನ್ನಪೂರ್ಣಾ, ರಾಜೇಶ್ವರಿ, ಪರಮೇಶ್ವರ ದೂಗೂರು, ಸುರೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net