ದೃಢ ಸಂಕಲ್ಪವೇ ಯಶಸ್ಸಿಗೆ ದಾರಿ | Welcome Program

ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಡಾ. ರವೀಂದ್ರ,  ಕೋಟೋಜಿ ರಾವ್, ಪ್ರಕಾಶ್ ಉಪಾಧ್ಯಾಯ, ಬಾಲಾಜಿ, ಹಂಸಾ, ಪ್ರಿಯಾಂಕಾ ಇತರರಿದ್ದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಡಾ. ರವೀಂದ್ರ, ಕೋಟೋಜಿ ರಾವ್, ಪ್ರಕಾಶ್ ಉಪಾಧ್ಯಾಯ, ಬಾಲಾಜಿ, ಹಂಸಾ, ಪ್ರಿಯಾಂಕಾ ಇತರರಿದ್ದರು.
Published on
 ಶಿಕಾರಿಪುರ:ಸಾಧನೆಯ ಹಾದಿಯಲ್ಲಿ ಪರಿಶ್ರಮ ಇದ್ದರೆ ಯಶಸ್ಸು ಸದಾ ನಮ್ಮ ನೆರಳಾಗಿ ಇರುತ್ತದೆ. ದೃಢ ಸಂಕಲ್ಪವೇ ನಮ್ಮ ಗೆಲುವಿನ ಸೂತ್ರಧಾರಿ ಎಂದು ಪ್ರಾಚಾರ್ಯ ಡಾ. ರವೀಂದ್ರ ಹೇಳಿದರು.
ಕುಮದ್ವತಿ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಶಿಕ್ಷಣದ ವೇಗಕ್ಕೆ ನಾವು ಹೊಂದಿಕೊಳ್ಳಬೇಕು. ನಮ್ಮ ಪರಿಶ್ರಮದ ಓಟ ನಿಲ್ಲಬಾರದು ಎಂದರು.
ಅಧ್ಯಯನದಿಂದ ನಮ್ಮ ಜ್ಞಾನ ವಿಸ್ತಾರವಾಗುತ್ತದೆ. ವಿದ್ಯಾರ್ಥಿ ಜೀವನವೆಂದರೆ ಅದು ಗುರಿಯೆಡೆಗೆ ಸಾಗಲು ಬೇಕಾದ ಪೂರಕ ತಯಾರಿ ಮಾಡಿಕೊಳ್ಳುವ ಪರ್ವಕಾಲ. ನಮ್ಮ ದೇಶ ಇಂದು ಜ್ಞಾನಾಧಾರಿತ, ಕೌಶಲಾಧಾರಿತವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾದ ಬದಲಾವಣೆ ನಮ್ಮಲ್ಲಿ ಬರಬೇಕಿದೆ. ಆಗ ಸಮಾಜದ ಏಳಿಗೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಸಾಧ್ಯ ಎಂದು ತಿಳಿಸಿದರು.
ಉಪನ್ಯಾಸಕ ಕೋಟೋಜಿ ರಾವ್ ಮಾತನಾಡಿ, ಯುವಜನರು ಸಮಾಜದ ಆಶಾಕಿರಣ. ತಮ್ಮಲ್ಲಿ ಸಮರ್ಪಣಾ ಭಾವ ಹಾಗೂ ದಿವ್ಯತೆ ಪಡೆದುಕೊಂಡಲ್ಲಿ ಯಶಸ್ಸು ಸಾಧ್ಯ. ದೃಷ್ಟಿಕೋನ ಬದಲಿಸದ ಹೊರತು ಸಾಧನೆ ಅಸಾಧ್ಯ ಎಂದು ಸಲಹೆ ನೀಡಿದರು.
ಉಪನ್ಯಾಸಕ ಪ್ರಕಾಶ್ ಉಪಾಧ್ಯಾಯ ಮಾತನಾಡಿ, ಸಾಧನೆ ಒಂದೆಡೆಯಾದರೆ, ಮಾನವ ಸಹಜವಾದ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಇತರರಿಗೆ ಮಾದರಿಯಾಗಬೇಕು. ಕೆಲವರು ತಮ್ಮ ವ್ಯಕ್ತಿತ್ವದಿಂದಲೇ ಬಹುವಾಗಿ ನೆನಪಾಗುತ್ತಾರೆ. ಗಾಂಧೀಜಿ, ವಿವೇಕಾನಂದರಂತಹ ವ್ಯಕ್ತಿತ್ವ ನಿಮ್ಮದಾಗಲಿ ಎಂದು ಆಶಿಸಿದರು.
ಉಪನ್ಯಾಸಕರಾದ ಬಾಲಾಜಿ, ಹಂಸಾ, ಪ್ರಿಯಾಂಕಾ, ಸಿಂಧೂ, ಶ್ವೇತಾ ಉಪಸ್ಥಿತರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net