ದೇಸಿ ಕ್ರೀಡೆಗೆ ನೀಡಬೇಕು ಪ್ರೋತ್ಸಾಹ | wrestling

ಶಿಕಾರಿಪುರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಸಂದೀಪ್ ಗೋಣಿ, ಸುಹಾಸ್ ಭಟ್, ರಾಜು ಹುಲ್ಮಾರ್ ಮಹೇಶ್, ಮಾಜಿ ರಾಘವೇಂದ್ರ ಇತರರಿದ್ದರು.
ಶಿಕಾರಿಪುರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಸಂದೀಪ್ ಗೋಣಿ, ಸುಹಾಸ್ ಭಟ್, ರಾಜು ಹುಲ್ಮಾರ್ ಮಹೇಶ್, ಮಾಜಿ ರಾಘವೇಂದ್ರ ಇತರರಿದ್ದರು.
Published on
ಶಿಕಾರಿಪುರ: ತಾಲೂಕು ಕುಸ್ತಿಗೆ ಮತ್ತು ಪಟುಗಳಿಗೆ ಪ್ರೋತ್ಸಾಹ ನೀಡಿದ ನಾಡು. ಇದಕ್ಕೆ ತಾಲೂಕಿನಾದ್ಯಂತ ಇರುವ ಹಲವು ಗರಡಿಮನೆಗಳೇ ಸಾಕ್ಷಿ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪುನೀತ್ ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ಕುಸ್ತಿ ಅಭಿಮಾನಿಗಳ ಬಳಗ ಶಿಕಾರಿಪುರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ನೇಪಾಳ ಮತ್ತು ರಷ್ಯಾ ಸೇರಿ ಹಲವು ದೇಶಗಳಿಂದ ಪಟುಗಳು ಆಗಮಿಸಿರುವುದು ಸಂತಸದ ವಿಷಯ ಎಂದರು.
ಸುದೀರ್ಘ ಇತಿಹಾಸವಿರುವ ಕುಸ್ತಿ ಕ್ರೀಡೆ ನಮ್ಮ ಹೆಮ್ಮೆ. ನಾನು ನಿಮ್ಮ ಆಶೀರ್ವಾದದ ಬಲದಿಂದ ಶಾಸಕ ಮತ್ತು ರಾಜ್ಯಾಧ್ಯಕ್ಷನಾಗಿದ್ದೇನೆ. ನೀವು ಇಲ್ಲಿ ಕುಸ್ತಿ ನೋಡುತ್ತಿದ್ದೀರಿ. ನಾನು ಸಹ ರಾಜ್ಯಾಧ್ಯಕ್ಷನಾಗಿ ಕುಸ್ತಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕುಸ್ತಿ ಪಂದ್ಯ ಅಪ್ಪಟ ದೇಸಿ ಕ್ರೀಡೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡೆ ಬೆಳಗುತ್ತಿದೆ. ನಮ್ಮ ರಾಜ, ಮಹಾರಾಜರು, ಸಾಮಂತರು, ಪಾಳೆಗಾರರು ಕುಸ್ತಿಗೆ ಮಹತ್ವ ನೀಡಿದ್ದರು. ಆಧುನಿಕ  ಮತ್ತು ಪಾಶ್ಚಾತ್ಯ ಕ್ರೀಡೆಗಳ ನಡುವೆ ದೇಸಿ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿರುವುದು ಸಮಯೋಚಿತ ಎಂದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕುಸ್ತಿ ಸಮಿತಿ ಅಧ್ಯಕ್ಷ ಸಂದೀಪ್ ಗೋಣಿ, ಸುಹಾಸ್ ಭಟ್, ರಾಜು ಹುಲ್ಮಾರ್ ಮಹೇಶ್, ಮಾಜಿ ರಾಘವೇಂದ್ರ, ನವೀನ್ ಶೆಟ್ಟಿ, ಬೆಣ್ಣೆ ಜಗದೀಶ್, ಗೋಣಿ ಪ್ರಕಾಶ್, ಸಿದ್ಲಿಂಗಪ್ಪ, ಹನುಮಂತಪ್ಪ, ಪಾಲಾಕ್ಷಪ್ಪ, ಚನ್ನವೀರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net