ಮಂಗಗಳ ಸ್ಥಳಾಂತರಿಸಲು ಒತ್ತಾಯ | Traders demand

ಬೀದಿದೀಪ, ಸಾರ್ವಜನಿಕ ಶೌಚಗೃಹ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಜೋಗ-ಕಾರ್ಗಲ್ ಪಪಂ ಮುಖ್ಯಾಧಿಕಾರಿ ಸುರೇಶ್ ಅವರಿಗೆ ವರ್ತಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪಾರ್ಶ್ವನಾಥ ಜೈನ್, ಪ್ರಸನ್ನ ಶೇಟ್, ಕೃಷ್ಣ ಮಹಾಲೆ ಇತರರಿದ್ದರು.
ಬೀದಿದೀಪ, ಸಾರ್ವಜನಿಕ ಶೌಚಗೃಹ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಜೋಗ-ಕಾರ್ಗಲ್ ಪಪಂ ಮುಖ್ಯಾಧಿಕಾರಿ ಸುರೇಶ್ ಅವರಿಗೆ ವರ್ತಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪಾರ್ಶ್ವನಾಥ ಜೈನ್, ಪ್ರಸನ್ನ ಶೇಟ್, ಕೃಷ್ಣ ಮಹಾಲೆ ಇತರರಿದ್ದರು.
Published on
ಕಾರ್ಗಲ್: ಪಟ್ಟಣದಲ್ಲಿ ಅಂಗಡಿಗಳು ಹಾಗೂ ಮನೆಗಳಿಗೆ ನುಗ್ಗಿ ಉಪಟಳ ನೀಡುತ್ತಿರುವ ಮಂಗಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಶರಾವತಿ ವರ್ತಕರ ಸಂಘದ ಪದಾಧಿಕಾರಿಗಳು ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮಂಗಗಳು ಇತ್ತೀಚೆಗೆ ಬಜಾರ್ ಲೈನ್‌ನ ಅಂಗಡಿಗಳಿಗೆ ನುಗ್ಗಿ ಸಾಮಗ್ರಿಯನ್ನು ಎಳೆದಾಡಿ, ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗುತ್ತಿವೆ. ಜನ ಸಾಮಾನ್ಯರ ಮೈಮೇಲೆ ಎರಗುತ್ತಿವೆ. ಇದರಿಂದ ಗ್ರಾಹಕರು ಮತ್ತು ವರ್ತಕರು ಭಯಪಡುವಂತಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಪಟ್ಟಣದ ಬಜಾರ್ ಲೈನ್‌ನಲ್ಲಿರುವ ಸಾರ್ವಜನಿಕ ಶೌಚಗೃಹ ನಿರ್ವಹಣೆಯಿಲ್ಲದೆ ದುರ್ನಾತದಿಂದ ಕೂಡಿದೆ. ಇದರಿಂದ ಅಂಗಡಿ ವರ್ತಕರು ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತಿದೆ. ಸ್ವಚ್ಛತೆ ಕೊರತೆ ಕಾರಣದಿಂದ ಸಂಜೆಯಾಗುತ್ತಿದ್ದಂತೆ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಗಲ್ ಪೇಟೆಯ ಬೀದಿ ದೀಪಗಳು ಸರಿಯಾದ ನಿರ್ವಹಣೆ ಇಲ್ಲದೆ ಕೆಲವು ದಿನಗಳಿಂದ ಉರಿಯುತ್ತಿಲ್ಲ. ಇದರಿಂದ ರಸ್ತೆಗಳಲ್ಲಿ ಕತ್ತಲು ಆವರಿಸಿರುತ್ತದೆ. ಪಟ್ಟಣದ ಈ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ ಸುರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ವರ್ತಕರ ಸಂಘದ ಅಧ್ಯಕ್ಷ ಪಾರ್ಶ್ವನಾಥ ಜೈನ್, ಕಾರ್ಯದರ್ಶಿ ಪ್ರಸನ್ನ ಶೇಟ್, ಪದಾಧಿಕಾರಿಗಳಾದ ಕೃಷ್ಣ ಮಹಾಲೆ, ಜಾಕೀರ್ ಹುಸೇನ್, ಸಂತೋಷ್ ಶೇಟ್, ರಾಹುಲ್, ಚರಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net