ಸೊಸೈಟಿ ಬೀಗಮುದ್ರೆ ತೆರವುಗೊಳಿಸಲು ಆಗ್ರಹ I open the society
ಹೊಸನಗರ ವೀರಶೈವ ಪತ್ತಿನ ಸಹಕಾರ ಸಂಘದ ಸಿಇಒ ಗೀತಾ ಗಿರೀಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಘದ ಈಶ್ವರಪ್ಪ ಗೌಡ, ಬಿ.ಎಚ್.ಬಸಪ್ಪ, ಹಾಲಪ್ಪ ಚಿಕ್ಕಮಣತಿ, ಜಯಶೀಲಪ್ಪಗೌಡ ಮತ್ತಿತರರು ಪ್ರತಿಭಟನೆ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆಡಳಿತ ಮಂಡಳಿಯಿಂದಲೇ ಪ್ರತಿಭಟನೆ
ತಾರಕಕ್ಕೇರಿದ ಸಂಘದೊಳಗಿನ ಸಮರ
ಸಿಇಒ ಅಮಾನತಿಗೆ ತೀವ್ರ ಒತ್ತಾಯ
ಶಿವಮೊಗ್ಗ: ಹೊಸನಗರದ ವೀರಶೈವ ಪತ್ತಿನ ಸಹಕಾರ ಸಂಘಕ್ಕೆ ಹಾಕಿರುವ ಬೀಗಮುದ್ರೆ ತೆರವುಗೊಳಿಸಬೇಕು. ಪ್ರಭಾರ ಸಿಇಒ (ceo) ನೇಮಕ ಮಾಡಬೇಕು. ಈವರೆಗೆ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಗೀತಾ ಗೀರೀಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂಘದ ಅಧ್ಯಕ್ಷರು, ಸದಸ್ಯ (member) ರು ಮತ್ತು ಷೇರುದಾರರು ಶುಕ್ರವಾರ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಎದುರು ಪ್ರತಿಭಟನೆ (protest) ನಡೆಸಿದರು.
ಸಿಇಒ ಗೀತಾ ಗೀರೀಶ್ ನೀಡಿರುವ ವರದಿಯಲ್ಲಿ ಸತ್ಯಾಂಶವಿಲ್ಲ. ಸಂಘಕ್ಕೆ ವಿಶೇಷಾಧಿಕಾರಿಗಳನ್ನು ನೇಮಿಸುವ ಅವಶ್ಯಕತೆಯೂ ಇರುವುದಿಲ್ಲ. ಸಂಘದ ಮಾಜಿ ಅಧ್ಯಕ್ಷರೊಬ್ಬರ ಬೆಂಬಲದೊಂದಿಗೆ ಗೀತಾ ಗೀರೀಶ್ ಸಂಘದ ನಿರ್ದೇಶಕರ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ನೀಡುತ್ತಿದ್ದಾರೆ. ಸಂಘದ ಕಚೇರಿಗೆ ಅಕ್ರಮವಾಗಿ ಬೀಗಹಾಕಿ ಆಡಳಿತ ಮಂಡಳಿಯವರ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.
ಸಂಘದ ವ್ಯವಹಾರದಲ್ಲಿ ಪಾರರ್ಶಕತೆ ಇಲ್ಲ. ಹಣ ಪಾವತಿ ಮಾಡಿದ್ದಕ್ಕೆ ರಸೀದಿ ನೀಡುತ್ತಿಲ್ಲ. ಸಂಘದ ಬಗ್ಗೆ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಸಿಇಒ ಗೀತಾ ಗೀರೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರು ಸಂಘದ ಕಚೇರಿಗೆ ಹಾಕಿರುವ ಬೀಗ ತೆಗೆಯಿಸಿ ಲೋಕೇಶ್ ಅವರಿಗೆ ಪ್ರಭಾರ ಅಧಿಕಾರ ನೀಡಿ ಸಂಘದ ಚಟುವಟಿಕೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಈಶ್ವರಪ್ಪ ಗೌಡ, ಉಪಾಧ್ಯಕ್ಷ ಬಿ.ಎಚ್.ಬಸಪ್ಪ, ನಿರ್ದೇಶಕರಾದ ಜಯಶೀಲಪ್ಪ ಗೌಡ, ಹಾಲಪ್ಪ ಚಿಕ್ಕಮಣತಿ, ಅಶೋಕ ಇತರರಿದ್ದರು.