ಸಾಗರ ಪ್ರತ್ಯೇಕ ಜಿಲ್ಲೆಗೆ ಒತ್ತಾಯ

ಸಾಗರವನ್ನು ಜಿಲ್ಲೆಯಾಗಿ ಘೋಷಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿ ಆಶ್ರಯದಲ್ಲಿ ಎಸಿ ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಾಕಪ್ಪ ಕಣ್ಣೂರು ಮಾತನಾಡಿದರು. ಬಿ.ಆರ್.ಜಯಂತ್, ಅ.ಪು.ನಾರಾಯಣಪ್ಪ, ಟಿ.ಡಿ.ಮೇಘರಾಜ್, ಮಹ್ಮದ್ ಖಾಸಿಂ ಇತರರಿದ್ದರು.
ಸಾಗರವನ್ನು ಜಿಲ್ಲೆಯಾಗಿ ಘೋಷಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿ ಆಶ್ರಯದಲ್ಲಿ ಎಸಿ ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಾಕಪ್ಪ ಕಣ್ಣೂರು ಮಾತನಾಡಿದರು. ಬಿ.ಆರ್.ಜಯಂತ್, ಅ.ಪು.ನಾರಾಯಣಪ್ಪ, ಟಿ.ಡಿ.ಮೇಘರಾಜ್, ಮಹ್ಮದ್ ಖಾಸಿಂ ಇತರರಿದ್ದರು.
Published on
ಸಾಗರ: ಸಾಗರ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿ ಪ್ರಮುಖರು ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.
ಸಾಗರ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿರುವ ಉಪ ವಿಭಾಗ. ಇದನ್ನು ಕೇಳುವುದು ನಮ್ಮ ಹಕ್ಕು. ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯವಾಗಿ ಶ್ರೇಷ್ಠತೆ ಹೊಂದಿದೆ. ಹಲವು ಹೋರಾಟದ ನೆಲೆಯಾಗಿರುವ ಸಾಗರವನ್ನು ಜಿಲ್ಲೆ ಮಾಡಿ ಎಂದು ಕೇಳುವುದು ಸೂಕ್ತವಾಗಿದ್ದು, ರೈಲ್ವೆ, ರಾಷ್ಟಿಯ ಹೆದ್ದಾರಿ ಹಾದುಹೋಗಿವೆ. ವಾಣಿಜ್ಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಬಿ.ಟಾಕಪ್ಪ ಹೇಳಿದರು.
ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ಮಲೆನಾಡು ಪ್ರದೇಶ ಭೌಗೋಳಿಕವಾಗಿ ವಿಸ್ತೀರ್ಣವಾಗಿದೆ. ಸುಮಾರು 130 ಕಿ.ಮೀ ವ್ಯಾಪ್ತಿ ಹೊಂದಿದೆ. ಕೊಡುಗು ಐದು ತಾಲೂಕು ಸೇರಿ ಒಂದು ಜಿಲ್ಲೆಯಾದರೆ, ರಾಮನಗರ ನಾಲ್ಕು ತಾಲೂಕು ಸೇರಿ ಒಂದು ಜಿಲ್ಲೆ ಮಾಡಲಾಗಿದೆ. ಭೌಗೋಳಿಕ ವಿಸ್ತೀರ್ಣ ಪರಿಗಣಿಸಿ ಸಾಗರವನ್ನು ಜಿಲ್ಲೆಯಾಗಿ ಘೋಷಿಸಲಿ. ಮಲೆನಾಡು ಪ್ರದೇಶಗಳನ್ನು ಸಣ್ಣ ಜಿಲ್ಲೆಯಾಗಿ ಮಾಡಿದರೆ ಅಭಿವೃದ್ಧಿಗೆ ಅವಕಾಶ ಆಗುತ್ತದೆ. ಸರ್ಕಾರಗಳು ಮಲೆನಾಡಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸಂಘ ಪರಿವಾರದ ಅ.ಪು.ನಾರಾಯಣಪ್ಪ ಮಾತನಾಡಿ, ಸಂಘ ಪರಿವಾರದ ಪಟ್ಟಿಯಲ್ಲಿ ಸಾಗರ ಜಿಲ್ಲೆಯನ್ನಾಗಿ ಬಹಳ ಹಿಂದೆಯೇ ಘೋಷಿಸಿಕೊಳ್ಳಲಾಗಿದೆ. ಸಾಗರ ಜಿಲ್ಲಾ ಕೇಂದ್ರವಾಗಲು ಎಲ್ಲ ಮೂಲ ಸೌಲಭ್ಯಗಳಿವೆ. ಜಿಲ್ಲೆ ಮಾಡಲು ಪಕ್ಷಾತೀತವಾಗಿ ಹೋರಾಟ ರೂಪಿಸಬೇಕು. ಅತಿಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿರುವ ಕಾರ್ಗಲ್ ಅನ್ನು ತಾಲೂಕು ಕೇಂದ್ರವಾಗಿ ರೂಪಿಸಬೇಕು ಎಂದು ಒತ್ತಾಯಿಸಿದರು.
10 ವರ್ಷಗಳ ಹಿಂದೆಯೇ ಹೋರಾಟ: ಹತ್ತು ವರ್ಷಗಳ ಹಿಂದೆ ಸಾಹಿತಿ ನಾ. ಡಿಸೋಜ ನೇತೃತ್ವದಲ್ಲಿ ಮೊದಲ ಬಾರಿಗೆ ಸಾಗರ ಜಿಲ್ಲೆ ಮಾಡಿ ಎನ್ನುವ ಹೋರಾಟ ನಡೆದಿತ್ತು. ಇದೀಗ ಕೇಂದ್ರ ಸರ್ಕಾರ ಹೊಸ ಜಿಲ್ಲೆಗಳ ರಚನೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಪ್ರತಿಭಟನೆ ಮಾಡಿ ಸಾಗರ ಜಿಲ್ಲೆ ಮಾಡಿ ಎಂದು ಮನವಿ ಸಲ್ಲಿಸಿದ್ದೇವೆ ಎಂದು ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದರು. ಶಾಸಕರು ಕೂಡಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಸಿಎಂ ಅವರನ್ನು ಭೇಟಿ ಮಾಡಿಸುವ ಭರವಸೆ ನೀಡಿದ್ದರು. ಡಿಸೆಂಬರ್ ಸಮೀಪಿಸುತ್ತಿದ್ದು, ಜಿಲ್ಲೆ ಮಾಡುವುದು ವಿಳಂಬವಾದರೆ ವಂಚಿತವಾಗುತ್ತದೆ. ಜನರ ತಾಳ್ಮೆಯನ್ನು ಪರೀಕ್ಷೆ ಮಾಡದೆ ಸರ್ಕಾರ ತಕ್ಷಣ ಜಿಲ್ಲೆಯಾಗಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಾಕಪ್ಪ ಕಣ್ಣೂರು ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮಹ್ಮದ್ ಖಾಸಿಂ, ದಿನೇಶ್ ಶಿರವಾಳ, ಎಂ.ಬಿ.ಮಂಜಪ್ಪ, ಎಸ್.ವಿ.ಹಿತಕರ ಜೈನ್, ಮಂಜುನಾಥ್ ಆಚಾರ್, ಸುಂದರ ಸಿಂಗ್, ಕನ್ನಪ್ಪ, ನಾಗರಾಜ, ಯು.ಪಿ.ಜೋಸೆಫ್, ಅಕ್ಬರ್ ಖಾನ್, ದೇವೇಂದ್ರಪ್ಪ, ಪ್ರಕಾಶ್, ರೇವಪ್ಪ, ಸೀತಾರಾಮ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net