ಕಾರ್ಮಿಕನ ಹತ್ಯೆ ಪ್ರಕರಣ ಸೂಕ್ತ ತನಿಖೆಗೆ ಒತ್ತಾಯ | Protest

ಸಾಗರದಲ್ಲಿ ಬಿಹಾರ ಮೂಲದ ಕಾರ್ಮಿಕನ ಹತ್ಯೆ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಬಜರಂಗದಳ, ವಿಎಚ್‌ಪಿ ಪದಾಧಿಕಾರಿಗಳಾದ ಸಂತೋಷ್ ಶಿವಾಜಿ, ಕೆ.ಆರ್.ಗಣೇಶ್‌ಪ್ರಸಾದ್, ಅರುಣ ಕುಗ್ವೆ, ಕೆ.ವಿ.ಪ್ರವೀಣ್ ಮತ್ತಿತರರು ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಿದರು.
ಸಾಗರದಲ್ಲಿ ಬಿಹಾರ ಮೂಲದ ಕಾರ್ಮಿಕನ ಹತ್ಯೆ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಬಜರಂಗದಳ, ವಿಎಚ್‌ಪಿ ಪದಾಧಿಕಾರಿಗಳಾದ ಸಂತೋಷ್ ಶಿವಾಜಿ, ಕೆ.ಆರ್.ಗಣೇಶ್‌ಪ್ರಸಾದ್, ಅರುಣ ಕುಗ್ವೆ, ಕೆ.ವಿ.ಪ್ರವೀಣ್ ಮತ್ತಿತರರು ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಿದರು.
Published on
ಸಾಗರ: ನಗರದ ರೂಟ್‌ಟಾಪ್ ಕೆಫೆಯಲ್ಲಿ ಗುರುವಾರ ಬಿಹಾರ ಮೂಲದ ಕಾರ್ಮಿಕನನ್ನು ಹತ್ಯೆಗೈದ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪದಾಧಿಕಾರಿಗಳು ಶುಕ್ರವಾರ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೂಟ್‌ಟಾಪ್ ಕೆಫೆ ಹೋಟೆಲ್‌ನಲ್ಲಿ ಟಿಂಕೂ ಶರ್ಮ ಎಂಬುವನನ್ನು ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಶವವನ್ನು ಎರಡು ತಾಸುಗಳ ಕಾಲ ಕಾರಿನಲ್ಲಿ ಶವ ಇರಿಸಿಕೊಂಡು ನಗರವ್ಯಾಪ್ತಿಯಲ್ಲಿ ಓಡಾಡಲಾಗಿದೆ ಎನ್ನುವ ಮಾಹಿತಿ ಇದೆ. ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆ ಕೊಡಿಸಬೇಕು. ಬಿಹಾರ ಸೇರಿ ಉತ್ತರ ಭಾರತದಿಂದ ಅನೇಕ ಯುವಕರು ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿರುತ್ತಾರೆ. ಅವರಿಗೆ ಸಂಬಳ ಕೊಡುವ ವಿಷಯದಲ್ಲಿ ತಗಾದೆ ತೆಗೆದು ಕೊಲೆ ಮಾಡಿರುವ ಕೃತ್ಯ ಅಮಾನವೀಯ. ಗುರುವಾರ ಸ್ಥಳಕ್ಕೆ ಬಂದ ಎಸ್ಪಿ ಪರಿಶೀಲನೆ ನಂತರ ನೀಡಿದ ಹೇಳಿಕೆ ಅನೇಕ ಅನುಮಾನಕ್ಕೆ ಕಾರಣವಾಗಿದೆ. ಕೊಲೆ ಕುರಿತು ಮೂಲದಿಂದ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಬಿಹಾರ ಸರ್ಕಾರಕ್ಕೆ ಪ್ರಕರಣದ ಮಾಹಿತಿ ರವಾನೆಯಾಗಿದೆ. ಹೊಟ್ಟೆಪಾಡಿಗೆ ಬಂದ ಕಾರ್ಮಿಕರ ಮೇಲೆ ಇಂತಹ ಹಲ್ಲೆ ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಜರಂಗ ದಳದ ಜಿಲ್ಲಾ ಸಂಚಾಲಕ ಸಂತೋಷ್ ಶಿವಾಜಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್‌ಪ್ರಸಾದ್, ಯುವಮೋರ್ಚಾ ಜಿಲ್ಲಾ ಮುಖಂಡ ಅರುಣ ಕುಗ್ವೆ, ವಕೀಲ ಕೆ.ವಿ. ಪ್ರವೀಣ್, ಬಿ.ಟಿ.ರವೀಂದ್ರ, ಪರಶುರಾಮ್, ಸುರೇಶ್, ವಿಜಯೇಂದ್ರ, ಸುನೀಲ್ ರುದ್ರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net