ಕಟ್ಟಡಗಳ ಒತ್ತುವರಿ ತೆರವಿಗೆ ಆಗ್ರಹ

ಭದ್ರಾವತಿ ತಹಸೀಲ್ದಾರ್​ ಕೆ.ಪರುಸಪ್ಪ ಅವರಿಗೆ ಶಿವಮೊಗ್ಗ&ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್​.ರವಿಕುಮಾರ್​ ಮನವಿ ಸಲ್ಲಿಸಿದರು.
ಭದ್ರಾವತಿ ತಹಸೀಲ್ದಾರ್​ ಕೆ.ಪರುಸಪ್ಪ ಅವರಿಗೆ ಶಿವಮೊಗ್ಗ&ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್​.ರವಿಕುಮಾರ್​ ಮನವಿ ಸಲ್ಲಿಸಿದರು.
Published on
ಭದ್ರಾವತಿ: ನಗರದ ಬಿ.ಎಚ್​.ರಸ್ತೆಯ ಪದ್ಮನಿಲಯ ಹೋಟೆಲ್​ ಸೇರಿ ಒತ್ತುವರಿಯಾಗಿರುವ ಇತರ 9 ಕಟ್ಟಡಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್​.ರವಿಕುಮಾರ್​ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಹಿಂದೆ 2017ರಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ನಗರಸಭೆ, ಪಿಡಬ್ಲುಡಿ ಹಾಗೂ ಕಂದಾಯ ಅಧಿಕಾರಿಗಳ ಜಂಟಿ ಸಭೆಯಲ್ಲಿ ಬಿ.ಎಚ್​.ರಸ್ತೆ ಪದ್ಮನಿಲಯ ಹೋಟೆಲ್​ ಮುಂಭಾಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು, ಪದ್ಮ ನಿಲಯ ಹೋಟೆಲ್​ ಸೇರಿ 9 ಕಟ್ಟಡಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಇದುವರೆಗೂ ತೆರವುಗೊಳಿಸಿಲ್ಲ. ಹೋಟೆಲ್​ ಮುಂಭಾಗದಲ್ಲಿ ವಾಹನಗಳು ಹೆಚ್ಚಾಗಿ ನಿಲ್ಲುವುದರಿಂದ ಪಾದಚಾರಿಗಳು ಹಾಗೂ ದ್ವಿಚಕ್ರವಾಹನ ಸವಾರಿಗೆ ಅನನುಕೂಲವಾಗಿದೆ. ಕೂಡಲೇ ಕಟ್ಟಡಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net