ಸಾಗರ ತಾಲೂಕಿನ ಕಾರಣಿ ಗ್ರಾಮದ ರೈತರು ಹಕ್ಕುಪತ್ರಕ್ಕಾಗಿ ಸಲ್ಲಿಸಿದ ಅರ್ಜಿ ವಿಲೇವಾರಿ ಮಾಡಲು ಆಗ್ರಹಿಸಿ ಚೆನ್ನಗೊಂಡ ಪಿಡಿಒಗೆ ಮನವಿ ಸಲ್ಲಿಸಲಾಯಿತು. ಕಾಂತರಾಜ, ನಂದೀಶ್, ವಿಜಯಕುಮಾರ್, ಶೇಖರಪ್ಪ, ಪದ್ಮರಾಜ್ ಇತರರಿದ್ದರು.
ಸಾಗರ: ಸ್ವಾಧೀನದಲ್ಲಿರುವ ಭೂಮಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರೂ ಈತನಕ ಅರ್ಜಿ ವಿಲೇವಾರಿಯಾಗಿಲ್ಲ. ಶ್ರೀ ಅರ್ಜಿ ವಿಲೇವಾರಿ ಮಾಡುವಂತೆ ಆಗ್ರಹಿಸಿ ರೈತರು ಚೆನ್ನಗೊಂಡ ಪಿಡಿಒಗೆ ಮನವಿ ಸಲ್ಲಿಸಿದರು.
ತಾಲೂಕಿನ ಚೆನ್ನಗೊಂಡ ಗ್ರಾಪಂ ವ್ಯಾಪ್ತಿಯ ಕಾರಣಿ ಗ್ರಾಮದ ಸರ್ವೇ ನಂ.153, 152, 119, 77, 126 ಹಾಗೂ ಸರ್ವೇ ನಂ.1ರಲ್ಲಿರುವ ಕಂದಾಯ ಹಾಗೂ ಗೋಮಾಳ ಭೂಮಿಯನ್ನು ರೈತರು ಲಾಗಾಯ್ತಿನಿಂದ ಉಳುಮೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅರಣ್ಯ ಇಲಾಖೆಯವರು ಏಕಾಏಕಿ ಈ ಭೂಮಿಯನ್ನು ಪರಿಭಾವಿತ ಅರಣ್ಯ ಮತ್ತು ಅಭಯಾರಣ್ಯ ಎಂದು ಗುರುತಿಸಿದ್ದಾರೆ. ರೈತರು ಲಾಗಾಯ್ತಿನಿಂದ ಉಳುಮೆ ಮಾಡುತ್ತಿರುವ ಜಮೀನನ್ನು ಯಾವ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದರು.
ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ರೈತರು ನಾಡಿಗೆ ವಿದ್ಯುತ್ ನೀಡಲು ಎರಡು ಬಾರಿ ಮುಳುಗಡೆಯಾಗಿ ತಮ್ಮ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂದಿಗೂ ರೈತರು ತಾವು ವಾಸಿಸುವ ಭೂಮಿಗೆ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಅರಣ್ಯ ಇಲಾಖೆಯವರು ಕಂದಾಯ ಭೂಮಿಯನ್ನು ಡೀಮ್ಡ್ ಾರೆಸ್ಟ್ ಎಂದು ೂಷಿಸುವ ಮೊದಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಸಭೆ ನಡೆಸಿ ರೈತರ ಮನವಿ ಪುರಸ್ಕರಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ರೈತರಿಗೆ ನ್ಯಾಯ ಕೊಡಿಸಬೇಕು. ಈಗಾಗಲೇ ಜಿಲ್ಲಾಧಿಕಾರಿ, ಅರಣ್ಯಾಧಿಕಾರಿಗಳಿಗೆ ಗ್ರಾಮಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದ್ದಾರೆ. ಇದನ್ನು ಪಾಲನೆ ಮಾಡಬೇಕು ಎಂದು ಒತ್ತಾಯಿಸಿದರು.