ಸಮರ್ಪಕವಾಗಿ ಔಷಧ ಪೂರೈಸುವಂತೆ ಒತ್ತಾಯಿಸಿ ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಡಾ. ನಾಗೇಂದ್ರಪ್ಪ, ವಿಜಯಮ್ಮ, ಡಾ. ಸುರೇಶ್, ಡಾ. ಸುಮಾ, ಡಾ. ಆಶಾ ಇತರರಿದ್ದರು.
ಸಾಗರ: ಸರ್ಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧಗಳನ್ನು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ನೌಕರರ ಸಂಘದ ಪ್ರಮುಖರು ಎಸಿ ಕಚೇರಿ ಎದುರು ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ನೌಕರರ ಸಂಘದ ಪ್ರಮುಖರು ಪ್ರತಿಭಟನೆ ನಡೆಸಿದರು.
ಆರೋಗ್ಯ ಇಲಾಖೆಯ ವೈದ್ಯ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈತನಕ 13 ಸಭೆಗಳನ್ನು ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಒಂದೂ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಸರ್ಕಾರ ತಕ್ಷಣ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮಾ.11ರಿಂದ ಸೇವೆ ಸ್ಥಗಿತಗೊಳಿಸಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸರ್ಕಾರವೇ ಹೊಣೆ ಎಂದು ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ನಾಗೇಂದ್ರಪ್ಪ ಎಚ್ಚರಿಸಿದರು.
ಒಟ್ಟು 800 ಔಷಧಗಳನ್ನು ಕೊಡಬೇಕಾಗಿದೆ, ಆದರೆ ನಮಗೆ ಕೇವಲ 140 ಔಷಧಗಳನ್ನು ಪೂರೈಸಲಾಗುತ್ತಿದೆ. ಹೊರಗೆ ಔಷಧ ಬರೆದು ಕೊಟ್ಟರೆ ನಮಗೆ ನೋಟಿಸ್ ಕೊಡುತ್ತಾರೆ. ಪ್ರತಿದಿನ ರೋಗಿಗಳ ಜತೆ ಜಗಳ ಮಾಡಿಕೊಳ್ಳಬೇಕಾದ ಸ್ಥಿತಿ ಸರ್ಕಾರ ನಿರ್ಮಾಣ ಮಾಡಿದೆ. ನಮ್ಮ ಬೇಡಿಕೆಗಳು ಸರ್ಕಾರಕ್ಕೆ ಹೊರೆಯಂತೂ ಆಗುವುದಿಲ್ಲ. ತಕ್ಷಣ ಸರ್ಕಾರ ವೈದ್ಯಸಿಬ್ಬಂದಿಯ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು
ಶುಶ್ರೂಷ ಅಧಿಕಾರಿಗಳ ಸಂಘದ ಅಧ್ಯಕ್ಷೆ ವಿಜಯಮ್ಮ ಮಾತನಾಡಿ, ಈಗಾಗಲೆ 13 ಬಾರಿ ಆರೋಗ್ಯ ಸಚಿವರಿಗೆ, ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇವೆ. ಭೇಟಿ ಮಾಡಿ ಸಮಸ್ಯೆ ಹೇಳಿದ್ದೇವೆ. ಆದರೆ ಯಾರೂ ಸ್ಪಂದಿಸುತ್ತಿಲ್ಲ. ಶ್ರುಶೂಷಕಾಧಿಕಾರಿಗಳಿಗೆ ಪದೋನ್ನತಿ ಕೊಡುತ್ತೇವೆ ಎಂದು ಅನೇಕ ಬಾರಿ ಭರವಸೆ ನೀಡಿದ್ದರು. ಆದರೆ ಭರವಸೆಯಾಗಿಯೇ ಉಳಿದಿದೆ. ಆರ್ಥಿಕ ನಷ್ಟವಿಲ್ಲದ ನಮ್ಮ ಬೇಡಿಕೆಯನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದರು
ಡಾ. ಶ್ರೀನಿವಾಸ್, ಡಾ. ಸುರೇಶ್, ಡಾ. ಹರೀಶ್, ಡಾ. ದೇವರಾಜ್, ಡಾ. ಶಾಂತಲಾ, ಡಾ. ಸುಮಾ, ಡಾ. ಆಶಾ, ಡಾ. ಮಹೇಂದ್ರ, ಡಾ. ಗಜೇಂದ್ರ, ಡಾ. ಗಣೇಶ್, ಲೋಹಿತ್, ಮಾ.ಸ.ನಂಜುಂಡಸ್ವಾಮಿ, ಜುಬೇದಾ, ಸಹದೇವ್ ಇತರರಿದ್ದರು.