ಮನೆ ಹಕ್ಕುಪತ್ರ, ಶ್ರೀಗಂಧ ಪೂರೈಕೆ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಸಾಗರದ ಶ್ರೀಗಂಧ ಸಂಕೀರ್ಣದ ಆವರಣದಲ್ಲಿ ಕರಕುಶಲ ಕರ್ಮಿಗಳು ಶಾಸಕ ಗೋಪಾಲಕೃಷ್ಣ ಬೇಳೂರು, ತಹಸೀಲ್ದಾರ್ ರಶ್ಮಿ ಅವರಿಗೆ ಮನವಿ ಸಲ್ಲಿಸಿದರು. ಅಣ್ಣಪ್ಪ, ದೀಪಕ್, ನಾಗರಾಜ್, ಶಿವಾನಂದ್, ತಿರುಮಲೇಶ್ ಇತರರಿದ್ದರು.
ಸಾಗರ: ಸರ್ಕಾರದ ಸವಲತ್ತುಗಳು ಕರಕುಶಲ ಕರ್ಮಿಗಳಿಗೆ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಗರದ ಶ್ರೀಗಂಧ ಸಂಕೀರ್ಣದ ಆವರಣದಲ್ಲಿ ಕರಕುಶಲ ಕರ್ಮಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಕರಕುಶಲ ಕಲೆಯನ್ನೇ ನಂಬಿ ಜೀವನ ನಡೆಸುತ್ತಿರುವ ನಮ್ಮ ಬದುಕು ಸಂಕಷ್ಟದಲ್ಲಿದೆ. ಕೆಲಸ ಮಾಡಲು ಶ್ರೀಗಂಧ ಸಿಗುತ್ತಿಲ್ಲ. ಜತೆಗೆ ಸರ್ಕಾರದ ಯಾವ ಸೌಲಭ್ಯವೂ ತಲುಪುತ್ತಿಲ್ಲ. ವಿಶ್ವ&1, ವಿಶ್ವ&2 ಹಾಗೂ ಪಶ್ಚಿಮಟ್ಟ ಡಿಸಿಎಚ್ ಯೋಜನೆಯಡಿ ಕುಶಲಕರ್ಮಿಗಳು, ಸರ್ಕಾರ ಜಂಟಿಯಾಗಿ ನಿರ್ಮಿಸಿದ್ದ ವಸತಿ ಯೋಜನೆ ತಲುಪುತ್ತಿಲ್ಲ. 22 ವರ್ಷಗಳ ಗುತ್ತಿಗೆ ಒಪ್ಪಂದದ ಮೇರೆಗೆ ಕುಶಲಕರ್ಮಿಗಳಿಗೆ ಮನೆ ನಿರ್ಮಿಸಲಾಗಿದೆ. ಅವಧಿ ಮುಗಿದಿದ್ದರೂ ಈತನಕ ಸರ್ಕಾರ ಮನೆಯ ಹಕ್ಕುಪತ್ರ ಹಸ್ತಾಂತರಿಸಿಲ್ಲ. ಸಾಗರ, ಸೊರಬ, ಶಿರಸಿಯಲ್ಲಿ ವಸತಿಗೃಹಗಳು ನಿರ್ಮಾಣವಾಗಿದ್ದರೂ ಲಾನುಭವಿಗಳಿಗೆ ಲಭಿಸಿಲ್ಲ ಎಂದು ಕರಕುಶಲ ಕರ್ಮಿಗಳ ಸಮಿತಿ ಅಧ್ಯ ಲೋಕೇಶ್ಕುಮಾರ್ ಗುಡಿಗಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸೊರಬ, ಶಿರಸಿ ಸಂಕೀರ್ಣಗಳು ಮೂಲ ಸೌಲಭ್ಯವಿಲ್ಲದೆ ಪಾಳುಬಿದ್ದಿವೆ. 60 ವರ್ಷ ಮೇಲ್ಪಟ್ಟ ನೋಂದಾಯಿತ ಕುಶಲಕರ್ಮಿಗಳಿಗೆ ಕೆಲಸ ಮಾಡಲು ದೃಷ್ಟಿ ಮಂದವಾಗಿದೆ. ಸರ್ಕಾರ ಅವರಿಗೆ ಮಾಸಾಶನ ನೀಡಬೇಕು. ಶಿರಸಿ, ಸೊರಬ ಸಂಕೀರ್ಣವನ್ನು ಅಭಿವೃದ್ಧಿಪಡಿಸಬೇಕು. ಕುಶಲಕರ್ಮಿಗಳಿಗೆ ವಿಮಾ ಯೋಜನೆಯನ್ನು ಮರು ಆರಂಭಿಸಬೇಕು. ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ನೋಂದಾಯಿತ ಮೃತ ಕುಶಲಿಕರ್ಮಿಗಳ ಗುರುತಿನ ಪತ್ರವನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಕುಶಲಕರ್ಮಿಗಳು ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡುವ ಸ್ಥಿತಿ ಬರಬಾರದು. ಸರ್ಕಾರ ನಿಮ್ಮ ಪರವಾಗಿದೆ. ಶಿರಸಿ ಮತ್ತು ಸೊರಬ ಸಂಕೀರ್ಣಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಸಚಿವರಿಗೆ ಪತ್ರ ಬರೆಯಲಾಗುತ್ತದೆ. ಕುಶಲಕರ್ಮಿಗಳನ್ನು ಕಲಾವಿದರು ಎಂಬ ಪಟ್ಟಿಗೆ ಸೇರಿಸಿರುವುದರಿಂದ ಸೌಲಭ್ಯ ಸಿಗುತ್ತಿಲ್ಲ. ಕಾರ್ಮಿಕರ ಪಟ್ಟಿಗೆ ಸೇರಿಸಲು ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಲಾಗುವುದು.