ಪಾರ್ವತಿ ನೀಲಕಂಠೇಶ್ವರ ದೇಗುಲದಲ್ಲಿ ದೀಪೋತ್ಸವ | Special puja

ನಗರ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿಯಲ್ಲಿ ನೆರವೇರಿದ ದೀಪೋತ್ಸವದಲ್ಲಿ ಪೂಜೆ ಸಲ್ಲಿಸುತ್ತಿರುವುದು.
ನಗರ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿಯಲ್ಲಿ ನೆರವೇರಿದ ದೀಪೋತ್ಸವದಲ್ಲಿ ಪೂಜೆ ಸಲ್ಲಿಸುತ್ತಿರುವುದು.
Published on
ಹೊಸನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ನಗರ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಚಂಡಿಕಾ ಪಾರಾಯಣ, ಪಂಚಾಮೃತ ಅಭಿಷೇಕ, ಮಹಾ ಅನ್ನಸಂತರ್ಪಣೆ ನಡೆಯಿತು. ದೀಪೋತ್ಸವ ಅಂಗವಾಗಿ ವಿಶೇಷ ಪೂಜೆ, ಹೋಮಗಳು ನೆರವೇರಿದವು.
ಶ್ರೀ ನೀಲಕಂಠೇಶ್ವರ ಪುರೋತ್ಸವದಲ್ಲಿ ಶ್ರೀ ಗುಡ್ಡೇ ವೆಂಕರಮಣ, ಶ್ರೀ ಕಾಳಿಕಾಂಬ, ಶ್ರೀ ವೀರಾಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವವೂ ಕೂಡಾ ಪುರೋತ್ಸವದಲ್ಲಿ ಭಾಗಿಯಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಭಕ್ತರು ಮನೆಬಾಗಿಲಿನಲ್ಲಿ ಹಣ್ಣು-ಕಾಯಿ ಕೊಟ್ಟು ಪೂಜೆ ನೆರವೇರಿಸಿದರು. ಬಳಿಕ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿಯಲ್ಲಿ ಹಣತೆ ಬೆಳಗುವ ಮೂಲಕ, ಚಂಡೆ, ವಾದ್ಯ ನಿನಾದದೊಂದಿಗೆ ಅದ್ದೂರಿ ದೀಪೋತ್ಸವ, ಮಹಾಮಂಗಳಾರತಿ ನೆರವೇರಿತು.
ಪರಮೇಶ್ವರ ಭಟ್, ಭಾಸ್ಕರ ಭಟ್ ಪೌರೋಹಿತ್ಯದಲ್ಲಿ ದೀಪೋತ್ಸವ ಜರುಗಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ವಿನಾಯಕ ಉಡುಪ, ಕೃಷ್ಣ ಐತಾಳ, ಸುಧೀಂದ್ರ ಭಂಡಾರಕರ್, ನಾಗಭೂಷಣ ಉಡುಪ, ಎನ್.ಸತ್ಯನಾರಾಯಣ, ರತ್ನಾಕರ ಮಂಜರು, ವಿಜಯ, ಶ್ರೀಧರ ಶೆಟ್ಟಿ, ಜೂಡೋ ರವಿ, ಸರಿತಾ ಚಂದ್ರಮೌಳಿ, ಶಿಲ್ಪಾ ಹೊಳ್ಳ, ಭಾಗ್ಯಾ ಶಿವಶಂಕರ್, ಶ್ರೀಕರ ನಗರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net