ಸಂಗೀತ ಕಲಿಕೆಗೆ ಶ್ರದ್ಧೆ ಅವಶ್ಯ | music programme

ಸಾಗರದಲ್ಲಿ ಆಯೋಜಿಸಿದ್ದ ‘ಲಯಪರಂಪರಾ ಬೈಠಕ್ ಸೀರೀಸ್’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ತಬಲ ವಾದಕ ಘನಶಾಮ್ ಕೇಶವ್ ಏಕವ್ಯಕ್ತಿ ತಬಲಾ ಪ್ರದರ್ಶನ ನೀಡಿದರು.
ಸಾಗರದಲ್ಲಿ ಆಯೋಜಿಸಿದ್ದ ‘ಲಯಪರಂಪರಾ ಬೈಠಕ್ ಸೀರೀಸ್’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ತಬಲ ವಾದಕ ಘನಶಾಮ್ ಕೇಶವ್ ಏಕವ್ಯಕ್ತಿ ತಬಲಾ ಪ್ರದರ್ಶನ ನೀಡಿದರು.
Published on
ಸಾಗರ: ಸಂಗೀತ ಸಿದ್ಧಿ ಆಗಬೇಕು ಎಂದರೆ ಅದಕ್ಕೆ ನಿರಂತರತೆ, ಶ್ರದ್ಧೆ ಇರಬೇಕು. ಕಲಿಕೆಗೆ ಗ್ರಹಿಕೆ ಬಹಳ ಮುಖ್ಯ ಎಂದು ಪಂ.ಮೋಹನ್ ಹೆಗಡೆ ಹುಣಸೆಕೊಪ್ಪ ಹೇಳಿದರು.
ಪಟ್ಟಣದ ವಿಜಯನಗರದ ಬಡಾವಣೆಯಲ್ಲಿ ಆಯೋಜಿಸಿದ್ದ ‘ಲಯಪರಂಪರಾ ಬೈಠಕ್ ಸೀರೀಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಯ ಮತ್ತು ಶ್ರುತಿ ಕೇವಲ ಸಂಗೀತ ಅಥವಾ ನೃತ್ಯಕ್ಕೆ ಸೀಮಿತವಾಗಿಲ್ಲ. ನಮ್ಮ ಉಸಿರಾಟದಲ್ಲಿ, ನಡಿಗೆಯಲ್ಲಿ ಲಯಬದ್ಧತೆ ಇರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಮಕ್ಕಳ ಕೈಯಲ್ಲಿ ನಾವೇ ಮೊಬೈಲ್ ೆನ್ ಕೊಟ್ಟು ಈಗ ಪಶ್ಚಾತ್ತಾಪಪಡಬೇಕಾಗಿದೆ. ಮೊಬೈಲ್ ಗೀಳು ತಪ್ಪಿಸಲು ಲಲಿತಕಲೆಗಳ ಮೇಲೆ ಆಸಕ್ತಿ ಮೂಡಿಸುವುದು ಅತ್ಯಂತ ಉತ್ತಮ ಪರಿಹಾರ ಎಂದು ಹೇಳಿದರು.
ತಬಲಾ ಶಿಕ್ಷಣ ಸಂಸ್ಥೆಯ ನಿಖಿಲ್ ವಿ. ಕುಂಸಿ ಮಾತನಾಡಿ, ಸಂಗೀತ, ನೃತ್ಯ ಮುಂತಾದ ಲಲಿತಕಲೆಗಳ ಶಿಕ್ಷಣ ನೀಡುತ್ತಿರುವ ಸಾಗರದ ಬಹುತೇಕ ಶಿಕ್ಷಣ ಸಂಸ್ಥೆಗಳು ಅನ್ಯ ಕಲಾ ಪ್ರಕಾರಗಳ ಪ್ರದರ್ಶನ ಏರ್ಪಡಿಸುವ ಪರಂಪರೆ ನಿರ್ಮಿಸಿವೆ. ತಬಲಾ ಕಲಿಯುತ್ತಿರುವ ವಿದ್ಯಾರ್ಥಿಗಳು ಹಿರಿಯ ಮತ್ತು ಪ್ರಸಿದ್ಧ ತಬಲ ವಾದಕರ ಏಕವ್ಯಕ್ತಿ ಪ್ರದರ್ಶನ ಗಮನಿಸುವ ಮೂಲಕ ತಬಲಾ ವ್ಯಾಕರಣ ಮನದಟ್ಟು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ತಬಲಾದಲ್ಲಿ ನಿರ್ದಿಷ್ಟ ಸ್ವರ, ವ್ಯಂಜನಗಳ ನುಡಿಸುವಿಕೆಯ ಸ್ಪಷ್ಟತೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ ಎಂದರು.
ಬೆಂಗಳೂರಿನ ಘನಶ್ಯಾಮ್ ಕೇಶವ್ ತಬಲಾ ಏಕವ್ಯಕ್ತಿ ಪ್ರದರ್ಶನ ನಡೆಸಿಕೊಟ್ಟರು. ಸಂವತ್ಸರ ಹಾರ್ಮೋನಿಯಂ ಸಾಥ್ ನೀಡಿದರು. ವಿದುಷಿ ವಸುಧಾ ಶರ್ಮಾ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ ಗಾಯನ ನಡೆಸಿಕೊಟ್ಟರು. ಸುವರ್ಣಾ ಹೆಗಡೆ , ಸಮನ್ವಿತಾ, ಲಯಾಂಕುರ ಟ್ರಸ್ಟ್‌ನ ಸಂಸ್ಥಾಪಕ ವಿಜಯೇಂದ್ರ, ಬಿ.ಜಿ.ಮಂಜಪ್ಪ, ಚಂದ್ರಕಲಾ, ಸುಮಂಗಲಾ, ಮಹಾಬಲೇಶ್ವರ, ಸುಬ್ಬಣ್ಣ, ವಿವೇಕಾನಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net