ತೀರ್ಥಹಳ್ಳಿ: ಪರಿಸರ ಸಂರಣೆ ಪ್ರತಿಯೊಬ್ಬ ವ್ಯಕ್ತಿಯ ಹೊಣೆ. ಅರಣ್ಯ ನಾಶದಿಂದ ಮಳೆ ಪ್ರಮಾಣ ಕುಗ್ಗುತ್ತಿರುವುದು ಆತಂಕಕಾರಿ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯ ಕರಾಳವಾಗಲಿದೆ ಎಂದು ಎಸಿಎ್ ಮಧುಸೂದನ್ ಎಚ್ಚರಿಸಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಪತ್ರಕರ್ತರ ಸಂವು ಅರಣ್ಯ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ರಕ್ಷಣೆಗಾಗಿ ಆಯಾ ಪ್ರದೇಶಗಳಿಗೆ ಅನುಗುಣವಾದ ಸಸಿಗಳನ್ನೇ ನೆಟ್ಟು ಪೋಷಣೆ ಮಾಡಬೇಕು ಎಂದು ತಿಳಿಸಿದರು.
ಪರಿಸರ ನಾಶದಿಂದ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಇಳಿಕೆಯಾಗುತ್ತಿದೆ. ಅರಣ್ಯ ನಾಶ ತಡೆಗಟ್ಟುವ ಹೊಣೆಗಾರಿಕೆ ಕೇವಲ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು. ಪತ್ರಿಕಾ ದಿನಾಚರಣೆಯ ನೆನಪಿನಲ್ಲಿ ಅರಣ್ಯ ರಣೆ ಬಗ್ಗೆ ಕಾಳಜಿ ವಹಿಸಿರುವುದು ಶ್ಲಾನೀಯ ಎಂದರು.
ಪತ್ರಕರ್ತ ಡಾನ್ ರಾಮಣ್ಣ ಮಾತನಾಡಿ, ಎಸಿಎ್ ಮಧುಸೂದನ್ ಅವರು ತಮ್ಮ ಹಿಂದಿನ ಅವಧಿಯಲ್ಲಿ ತುಂಗಾ ಕಾಲೇಜಿನ ಆವರಣದಲ್ಲಿ ಟ್ರೀ ಗಾರ್ಡ್ ಸಹಿತ ಸುಮಾರು 700 ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸಿದ್ದಾರೆ ಎಂದು ಸ್ಮರಿಸಿದರು.
ತಾಲೂಕು ಪತ್ರಕರ್ತರ ಸಂದ ಅಧ್ಯ ಮೋಹನ್ ಮುನ್ನೂರು, ತೀರ್ಥಹಳ್ಳಿ, ಮಂಡಗದ್ದೆ ವಲಯ ಅರಣ್ಯಾಧಿಕಾರಿಗಳಾದ ಆದರ್ಶ್, ವಿನಯ್, ಪತ್ರಕರ್ತರ ಸಂದ ರಾವೇಂದ್ರ ಮೇಗರವಳ್ಳಿ, ಶಿವಾನಂದ ಕರ್ಕಿ, ರಾಮಚಂದ್ರ, ಸಂತೋಷ್, ಶ್ರೀಕಾಂತ ನಾಯಕ್, ಪ್ರಸನ್ನ ಹೊಳ್ಳ, ಮನುಕುಮಾರ್, ಪ್ರವಿಣ್, ಅಯ್ ಇದ್ದರು.