ಸೊರಬ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆ ಸಂಪೂರ್ಣ ಹಾಳಾಗಿದೆ. ಕೂಡಲೇ ಸರ್ಕಾರ ಸೊರಬ & ಶಿಕಾರಿಪುರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ೂಷಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಉಪಾಧ್ಯಕ್ಷ ಉಮೇಶ್ ಪಾಟೀಲ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶನಿವಾರ ಆಯೋಜಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮುಂಗಾರು ಆರಂಭಗೊಂಡರೂ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಶೇ.70ರಷ್ಟು ಮಳೆಯೇ ಆಗಿಲ್ಲ. ಇದರಿಂದ ಜಿಲ್ಲೆಯ ಸೊರಬ ಹಾಗೂ ಶಿಕಾರಿಪುರ ತಾಲೂಕಿನ ರೈತರು ಬೆಳೆದ ಮೆಕ್ಕೆಜೋಳ ನೀರಿಲ್ಲದೆ ಒಣಗಿ ಹಾಳಾಗಿದೆ. ಕೂಡಲೇ ಸರ್ಕಾರ ಈ ಎರಡು ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳು ಎಂದು ೂಷಿಸುವಂತೆ ಒತ್ತಾಯಿಸಿದರು.
ಈಗಾಗಲೇ ರಾಜ್ಯಾದ್ಯಂತ ಚಳವಳಿ ನಡೆಸಿ ವಿದ್ಯುತ್ ನಿಗಮವನ್ನು ಖಾಸಗೀಕರಣ ಮಾಡದಂತೆ ಒತ್ತಾಯಿಸಲಾಗಿದೆ. ರಾಜ್ಯದ ನೀರಾವರಿ, ಲೋಕೋಪಯೋಗಿ ಹಾಗೂ ವಿದ್ಯುತ್ ಇಲಾಖೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡದಂತೆ ಬಿ.ಆರ್. ಅಂಬೇಡ್ಕರ್ ಕರಡು ರಚಿಸಿ ರ್ನಿಣಯ ಮಾಡಿದ್ದಾರೆ. ಆದರೂ ಸರ್ಕಾರ ವಿದ್ಯುತ್ ನಿಗಮವನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಲು ಹೊರಟಿದೆ. ಖಾಸಗೀಕರಣ ಕೈಬಿಟ್ಟು ಸರ್ಕಾರವೇ ಕಾರ್ಯನಿರ್ವಹಿಸಬೇಕು. ಖಾಸಗಿ ಕಂಪನಿಗೆ ವಹಿಸಿಕೊಡಬಾರದು ಎಂದು ಆಗ್ರಹಿಸಿದರು.
ಸಂದ ಜಿಲ್ಲಾಧ್ಯ ಮಂಜುನಾಥ್, ತಾಲೂಕು ಅಧ್ಯ ಸುಭಾಶ್ಚಂದ್ರ, ಶಿಕಾರಿಪುರದ ದಾನೇಶ್, ಜಿಲ್ಲಾ ಉಪಾಧ್ಯಕ್ಷ ಶೇಖರಪ್ಪ, ಸಾಗರ ಕಾರ್ಯಾಧ್ಯಕ್ಷ ಅಮೃತ್ ರಾಜ್, ನಾಗರಾಜ್, ಅನುಸೂಯ, ರೇಖಾ, ಮಂಜುನಾಥ್, ಮದನ್ ಕುಮಾರ್, ಚಂದ್ರು, ಗದಿಗೆಪ್ಪ ಗೌಡ, ಯುವರಾಜ್, ಪ್ರೇಮ್ ಕುಮಾರ್, ಶೇಖರಪ್ಪ ಇತರರಿದ್ದರು.