ನೃತ್ಯ ಸ್ಪರ್ಧೆ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ | kannada rajyotsava

ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೊರಬದಲ್ಲಿ ಆಯೋಜಿಸಿದ್ದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ನೃತ್ಯ ಕ್ಷೇತ್ರದ ಸಾಧಕರಾದ ಕರಿಬಸಪ್ಪ, ಸ್ಟೀವನ್ ಮಾಸ್ಟರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿ.ಪರಮೇಶ್ವರಪ್ಪ, ಎಸ್.ಮಂಜುನಾಥ್, ಹೊನ್ನಪ್ಪ, ರಾಘವೇಂದ್ರ, ದೀಪಾ ಇತರರಿದ್ದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೊರಬದಲ್ಲಿ ಆಯೋಜಿಸಿದ್ದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ನೃತ್ಯ ಕ್ಷೇತ್ರದ ಸಾಧಕರಾದ ಕರಿಬಸಪ್ಪ, ಸ್ಟೀವನ್ ಮಾಸ್ಟರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿ.ಪರಮೇಶ್ವರಪ್ಪ, ಎಸ್.ಮಂಜುನಾಥ್, ಹೊನ್ನಪ್ಪ, ರಾಘವೇಂದ್ರ, ದೀಪಾ ಇತರರಿದ್ದರು.
Published on
ಸೊರಬ: ಕನ್ನಡ ನಾಡು, ನುಡಿ, ಜಲ, ಗಡಿ ವಿಷಯ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಟಿಬದ್ಧವಾಗಿ ಹೋರಾಟ ಮಾಡಲಿದೆ ಎಂದು ಸಂಘಟನೆ ಅಧ್ಯಕ್ಷ ಎನ್.ಅರುಣ್‌ಕುಮಾರ್ ಹೇಳಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಡಾ. ರಾಜ್ ಕಲಾಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ, ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಿಂದ ಬಂದ ಡಾ. ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹಾಗಾಗಿ ಇಂತಹ ಕಾರ್ಯಕ್ರಮಗಳು ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತವೆ. ಸಂಘಟನೆಯು ಉತ್ತಮ ರೀತಿಯಲ್ಲಿ ಹೋರಾಟ ಮಾಡುತ್ತ ಬಂದಿದೆ. ನಾಡಿನ ರಕ್ಷಣೆಗಾಗಿ ಸದಾ ಸಿದ್ಧವಿದೆ ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಪರಮೇಶ್ವರಪ್ಪ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳಿಗೆ ಹಾಗೂ ಕನ್ನಡಿಗರ ಭಾವನೆಗಳಿಗೆ ತೊಂದರೆಯಾದಾಗ ಹೋರಾಟಕ್ಕೆ ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.
ಕರವೇ ಕನ್ನಡ ಸೇನೆ ತಾಲೂಕು ಘಟಕದ ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ನಮ್ಮ ಸಂಘಟನೆಯು ತಾಲೂಕಿನ ವಿವಿಧ ಹೋಬಳಿಗಳಲ್ಲಿ ಅನೇಕ ಕಾರ್ಯಕ್ರಮ ಮಾಡುತ್ತ ಬಂದಿದೆ. ಮುಂದೆಯೂ ಜಿಲ್ಲಾ ಮಟ್ಟದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೇರಣಾ ಪ್ರಶಸ್ತಿಯನ್ನು ಕರಿಬಸಪ್ಪ ಅವರಿಗೆ, ಶ್ರಮಜೀವಿ ಪ್ರಶಸ್ತಿಯನ್ನು ಸ್ಟೀವನ್ ಮಾಸ್ಟರ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರಮುಖರಾದ ಹೊನ್ನಪ್ಪ, ರಾಘವೇಂದ್ರ, ಶ್ರೀಧರ ನೆಮ್ಮದಿ, ವಿನಯ್, ಮಂಜುನಾಥ್, ಮಂಜು ಮಾಸ್ಟರ್, ಅವಿನಾಶ್, ಪ್ರವೀಣ್, ರಾಘವೇಂದ್ರ, ಅನಿಲ್‌ಕುಮಾರ್, ದೀಪಾ, ನಾಗರಾಜ್‌ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net