ಕನ್ನಡ ಸಾಹಿತ್ಯ ಓದುವ ಸಂಸ್ಕೃತಿ ಬೆಳೆಸಿ

ಶಿಕಾರಿಪುರದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಗಾಯಕಿ ಕಾಶೀಬಾಯಿ, ಡಿ.ಮಂಜುನಾಥ್, ಅಂಗಡಿ ರಾಮಣ್ಣ, ಕೆ.ಎಸ್.ಹುಚ್ರಾಯಪ್ಪ ಇತರರಿದ್ದರು.
ಶಿಕಾರಿಪುರದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಗಾಯಕಿ ಕಾಶೀಬಾಯಿ, ಡಿ.ಮಂಜುನಾಥ್, ಅಂಗಡಿ ರಾಮಣ್ಣ, ಕೆ.ಎಸ್.ಹುಚ್ರಾಯಪ್ಪ ಇತರರಿದ್ದರು.
Published on
ಶಿಕಾರಿಪುರ: ಪುಸ್ತಕಗಳ ಅಧ್ಯಯನವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಪಟ್ಟಣದ ತೇರುಬೀದಿಯಲ್ಲಿ ಪುಸ್ತಕ ಪ್ರಾಧಿಕಾರದಿಂದ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಮನೆ ಗ್ರಂಥಾಲಯವಾಗಿ ರೂಪುಗೊಳ್ಳಬೇಕು. ಹಿರಿಯರು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡರೆ ಮಕ್ಕಳು ಸಹ ಪುಸ್ತಕ ಓದುತ್ತಾರೆ ಎಂದು ತಿಳಿಸಿದರು.
ಪುಸ್ತಕ ಕೊಂಡು ಓದುವ ಸಂಸ್ಕೃತಿ ಬೆಳೆಯಬೇಕು. ಶಾಲೆಯಲ್ಲಿ ಶಿಕ್ಷಕರು ಸಹ ಓದಬೇಕು. ವಿದ್ಯಾರ್ಥಿಗಳು ಗುರು-ಹಿರಿಯರನ್ನು ನೋಡಿ ಕಲಿಯುತ್ತಾರೆ. ಮಕ್ಕಳಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂದರು.
ಗಾಯಕಿ ಕಾಶೀಬಾಯಿ ಮಾತನಾಡಿ, ಪುಸ್ತಕ ಸಂಸ್ಕೃತಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ಕೊಟ್ಟರೆ ಜ್ಞಾನ ವೃದ್ಧಿಯಾಗುತ್ತದೆ. ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯ ಕೆ.ಎಸ್.ಹುಚ್ರಾಯಪ್ಪ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ನವೀನ್‌ಕುಮಾರ್, ಗುಡಿ ಸಾಂಸ್ಕೃತಿಕ ಕೇಂದ್ರದ ಇಕ್ಬಾಲ್ ಅಹಮದ್, ಪತ್ರಕರ್ತ ಅಂಗಡಿ ರಾಮಣ್ಣ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಸ್.ಎನ್.ನರಸಿಂಹಸ್ವಾಮಿ, ಡಿ.ಪಿ.ಜನಾರ್ದನ್ ರಾಜ್ ಅರಸ್, ಸೋಮಶೇಖರ್, ಸುಕನ್ಯಾ, ಸ್ಕಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net