ಆಯನೂರು: ಆಯನೂರು ಸಮೀಪ ಸೋಮವಾರ ಬೆಳಗಿನಜಾವ ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗದ್ದೆಗೆ ನುಗ್ಗಿದೆ. ಹರಿಹರದಿಂದ 12 ಜನ ಶಿಕ್ಷಕರು ಶೃಂಗೇರಿ, ಹೊರನಾಡಿಗೆ ಪ್ರವಾಸಕ್ಕೆ ಹೋಗಿದ್ದರು. ಹೊರನಾಡಿನಿಂದ ಬರುತ್ತಿದ್ದ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ನಿಯಂತ್ರಣಕ್ಕೆ ಸಿಲುಕದೆ ಗದ್ದೆಗೆ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ವೈರ್‌ಗಳು ಕಾರಿನ ಮೇಲೆಯೇ ಬಿದ್ದಿದ್ದವು. ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ. ಚಾಲಕ, ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.