ಮೌಲ್ಯಯುತ ಜೀವನ ರೂಪಿಸಿಕೊಳ್ಳಿ

ಹೊಳೆಹೊನ್ನೂರು ಸಮೀಪ ಕಲ್ಲಿಹಾಳ್‌ನಲ್ಲಿ ಶ್ರೀ ಆಂಜನೇಯ ಸ್ವಾಮಿ ನೂತನ ದೇವಾಲಯ ಪ್ರವೇಶ ಕಾರ್ಯಕ್ರಮವನ್ನು ಚನ್ನಗಿರಿ ಕೇದಾರ ಹೀರೆಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ  ಎಚ್.ವಾಸು, ಎಚ್.ಎಲ್.ಷಡಾಕ್ಷರಿ ಇತರರಿದ್ದರು.
ಹೊಳೆಹೊನ್ನೂರು ಸಮೀಪ ಕಲ್ಲಿಹಾಳ್‌ನಲ್ಲಿ ಶ್ರೀ ಆಂಜನೇಯ ಸ್ವಾಮಿ ನೂತನ ದೇವಾಲಯ ಪ್ರವೇಶ ಕಾರ್ಯಕ್ರಮವನ್ನು ಚನ್ನಗಿರಿ ಕೇದಾರ ಹೀರೆಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಎಚ್.ವಾಸು, ಎಚ್.ಎಲ್.ಷಡಾಕ್ಷರಿ ಇತರರಿದ್ದರು.
Published on
ಹೊಳೆಹೊನ್ನೂರು: ಪರಸ್ಪರ ಪರೋಪಕಾರ ಗುಣ ಬೆಳೆಸಿಕೊಂಡರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಚನ್ನಗಿರಿ ಕೇದಾರ ಹೀರೆಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಕಲ್ಲಿಹಾಳ್‌ನಲ್ಲಿ ಶ್ರೀ ಆಂಜನೇಯ ಸ್ವಾಮಿ ನೂತನ ದೇವಾಲಯ ಪ್ರವೇಶ, ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಹಾಗೂ ಗರುಡಗಂಬ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರೂ ಜೀವನದಲ್ಲಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೌಲ್ಯಯುತ ಜೀವನ ನಡೆಸುವುದನ್ನು ಕಲಿಯಬೇಕು. ಗುರುಹಿರಿಯರ ಮಾರ್ಗದಲ್ಲಿ ಮುನ್ನಡೆಯಬೇಕು. ಸದಾ ದೇವನಾಮ ಸ್ಮರಣೆ ಮಾಡಬೇಕು. ಗಳಿಸಿದ್ದ ಹಣದಲ್ಲಿ ಸ್ವಲ್ಪ ಮೊತ್ತ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗವಾಗಬೇಕು ಎಂದರು.
ಗಾಳಿ ಬೀಸಿ ಅಡಿಕೆ ತೋಟಗಳು ನಷ್ಟ ಆಗಿದ್ದು, ರೈತರಿಗೆ ಸಮಸ್ಯೆ ಎದುರಾಗಿದೆ. ಸರ್ಕಾರಗಳು ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿ ಅಡಿಕೆ ಬೆಳೆಗಾರರ ಹಿತ ಕಾಯಬೇಕು ಎಂದು ತಿಳಿಸಿದರು.
ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ದೇವಸ್ಥಾನಗಳು ಗ್ರಾಮದ ಜನರ ಶ್ರದ್ಧಾಭಕ್ತಿ ತೋರಿಸುತ್ತವೆ. ದೇವರ ಆರಾಧನೆಯನ್ನು ಎಂದಿಗೂ ಬಿಡಬಾರದು. ಗ್ರಾಮಗಳಲ್ಲಿನ ಹಬ್ಬ, ಆಚರಣೆಗಳು ಗ್ರಾಮದ ಜನರ ಒಗ್ಗಟ್ಟು ತೋರಿಸುತ್ತದೆ. ಧರ್ಮ ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳಬೇಕು ಎಂದರು.
ಸಮಿತಿ ಅಧ್ಯಕ್ಷ ಎಚ್.ವಾಸು, ಎಚ್.ಎಲ್.ಷಡಾಕ್ಷರಿ, ಸಿ.ಹನುಮಂತು, ಅಜಯ್‌ಕುಮಾರ್, ಆರ್.ಉಮೇಶ್, ಶ್ರೀನಿವಾಸ್ ಕರಿಯಣ್ಣ, ಆರ್.ಮಂಜುನಾಥ್, ಪಿ.ಎಚ್.ಚಂದ್ರಪ್ಪ, ಶಿವಕುಮಾರ್, ರುದ್ರಮುನಿ, ನಾಗರಾಜ್, ಹಾಲಪ್ಪ, ಕೃಷ್ಣಪ್ಪ, ವಿಜಯಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net