ಸಹಕಾರ ಸಂಸ್ಥೆಗಳಿಗೆ ಎಲ್ಲರ ಬೆಂಬಲ ಅಗತ್ಯ

ಸಾಗರದ ಅಂಕಿತ ಕ್ರೆಡಿಟ್ ಸೌಹಾರ್ದ ಸಹಕಾರ ಸಂಸ್ಥೆಯಿಂದ ಏರ್ಪಡಿಸಿದ್ದ ಷೇರುದಾರರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಎಚ್.ಎಸ್.ಮಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಎಚ್.ಎನ್.ರಮೇಶ್, ಹೇಮಾ ಸಹದೇವ, ಮಂಗಳಾ ಇತರರಿದ್ದರು.
ಸಾಗರದ ಅಂಕಿತ ಕ್ರೆಡಿಟ್ ಸೌಹಾರ್ದ ಸಹಕಾರ ಸಂಸ್ಥೆಯಿಂದ ಏರ್ಪಡಿಸಿದ್ದ ಷೇರುದಾರರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಎಚ್.ಎಸ್.ಮಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಎಚ್.ಎನ್.ರಮೇಶ್, ಹೇಮಾ ಸಹದೇವ, ಮಂಗಳಾ ಇತರರಿದ್ದರು.
Published on
ಸಾಗರ: ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಸ್ಥಾಪಿಸುವ ಸಹಕಾರ ಸಂಸ್ಥೆಗಳು ಆರ್ಥಿಕವಾಗಿ ಗಟ್ಟಿಗೊಳ್ಳಲು ಎಲ್ಲರ ಬೆಂಬಲ ಅಗತ್ಯ ಎಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಚ್.ಎಸ್.ಮಂಜಪ್ಪ ಹೇಳಿದರು.
ಸಾಗರದ ಅಂಕಿತ ಕ್ರೆಡಿಟ್ ಸೌಹಾರ್ದ ಸಹಕಾರ ಸಂಸ್ಥೆಯಿಂದ ಏರ್ಪಡಿಸಿದ್ದ ಷೇರುದಾರರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ಕರ್ನಾಟಕ ನೀಡಿದ ಕೊಡುಗೆ ಅಪಾರವಾಗಿದೆ. ಅನೇಕ ವರ್ಷಗಳಿಂದ ಸಹಕಾರ ಸಂಸ್ಥೆಗಳು ಷೇರುದಾರರ ಹಿತ ಕಾಯುವ ಜತೆ ಸ್ಥಳೀಯವಾಗಿ ಸೇವಾಕಾರ್ಯಗಳಿಗೆ ಒತ್ತು ನೀಡುತ್ತಿದೆ. ಸಾಗರ ತಾಲೂಕಿನಲ್ಲಿ ಅನೇಕ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಎಚ್.ಎನ್.ರಮೇಶ್ ಮಾತನಾಡಿ, ಅಂಕಿತ ಸೌಹಾರ್ದ ಸಹಕಾರ ಸಂಸ್ಥೆ ಪ್ರತಿ ವರ್ಷ ಷೇರುದಾರರ ಸಮಾಲೋಚನಾ ಸಭೆ ನಡೆಸುತ್ತಿದ್ದು, ಆರ್ಥಿಕ ಶಕ್ತಿ ಗಟ್ಟಿಗೊಳಿಸಿಕೊಳ್ಳುವ ಕೆಲಸ ಮಾಡುತ್ತಿದೆ. 2025-26ನೇ ಸಾಲಿನಲ್ಲಿ ಸಂಸ್ಥೆಯು 27 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ ಶೇ. 11 ಡಿವಿಡೆಂಡ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಷೇರುದಾರ ಸ್ನೇಹಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು.
ಉಪಾಧ್ಯಕ್ಷೆ ಹೇಮಾ ಸಹದೇವ, ಆಂತರಿಕ ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್, ಮಂಗಳಾ, ವಿನುತಾ ಕಲ್ಸಿ, ಕೆ.ಸಹದೇವ್, ಎನ್.ಪ್ರಕಾಶ್, ಅಂಕಿತಾ ಕಲ್ಸಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net