ಸಂಘದ ಅಭಿವೃದ್ಧಿಗೆ ಸಹಕಾರ ಅವಶ್ಯ | Building inauguration

ಹೊಸನಗರ ತಾಲೂಕು ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಹಾಲಗದ್ದೆ ಉಮೇಶ್, ಕೆ.ಎನ್.ಜಯಶೀಲ ಗೌಡ, ಪಟೇಲ್ ಗರುಡಪ್ಪ ಗೌಡ ಇತರರಿದ್ದರು.
ಹೊಸನಗರ ತಾಲೂಕು ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಹಾಲಗದ್ದೆ ಉಮೇಶ್, ಕೆ.ಎನ್.ಜಯಶೀಲ ಗೌಡ, ಪಟೇಲ್ ಗರುಡಪ್ಪ ಗೌಡ ಇತರರಿದ್ದರು.
Published on
ಹೊಸನಗರ: ನಾಡು ಕಟ್ಟುವುದರಲ್ಲಿ ನಾಡಪ್ರಭು ಕೆಂಪೇಗೌಡರ ಶ್ರಮ ಮತ್ತು ದೂರದೃಷ್ಟಿ ಅಪಾರವಾದುದು. ಅವರು ಹಾಕಿಕೊಟ್ಟ ಭದ್ರ ಬುನಾದಿಯಿಂದಲೇ ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದೆ ಎಂದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಸಂಘದ ನವೀಕೃತ ಕಚೇರಿ ಮತ್ತು ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸಂಘ ಬೆಳವಣಿಗೆ ಆಗಬೇಕಾದರೆ ಸಾಕಷ್ಟು ಅಡೆತಡೆಗಳು ಬರುವುದು ಸಹಜ. ಅವೆಲ್ಲವನ್ನೂ ದಾಟಿ ಸಂಘದ ಪದಾಧಿಕಾರಿಗಳು ಉತ್ತಮ ಕಾರ್ಯವನ್ನು ಸಾಧಿಸಿದ್ದೀರಿ. ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲು ಸಮುದಾಯದ ಪ್ರತಿಯೊಬ್ಬರ ಸಲಹೆ, ಸಹಕಾರ ಅಗತ್ಯ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಒಂದು ಸಮುದಾಯದ ಕಟ್ಟಡವನ್ನು ಕಡಿಮೆ ಸಮಯದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ನಿರ್ಮಿಸಿರುವುದು ನಿಜಕ್ಕೂ ಸವಾಲಿನ ಕೆಲಸ. ಶಾಸಕನಾಗಿ ಸಂಘದ ಏಳಿಗೆಗೆ ನಿರಂತರವಾಗಿ ಸಹಕಾರ ನೀಡುವುದಾಗಿ ತಿಳಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಈ ಹಿಂದೆ ನಾನು ಶಾಸಕನಾಗಿದ್ದಾಗ ಹೊಸನಗರ ಒಕ್ಕಲಿಗರ ಸಂಘಕ್ಕೆ 5 ಲಕ್ಷ ರೂ. ದೇಣಿಗೆ ನೀಡಿದ್ದು, ಅದು ಸಂಘದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಮುಂದೆಯೂ ನೀಡುತ್ತೇನೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಲಗದ್ದೆ ಉಮೇಶ್ ಮಾತನಾಡಿ, ಸಂಘದ ಸರ್ವ ಸದಸ್ಯರ ಸಹಕಾರದಿಂದ ವ್ಯವಸ್ಥಿತ ಕಟ್ಟಡವನ್ನ ನಿರ್ಮಿಸಿಕೊಂಡಿದ್ದೇವೆ. ಈ ಹಿಂದೆ ಸಮುದಾಯದ ಬಹಳಷ್ಟು ಪ್ರಮುಖರು ಸಮಾಜದ ಏಳಿಗೆಗೆ ದುಡಿದಿದ್ದಾರೆ. ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೂಡಾ ಬಹಳಷ್ಟು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ತಾಲೂಕು ಸಂಘದ ಉಪಾಧ್ಯಕ್ಷ ಕೆ.ಎನ್.ಜಯಶೀಲ ಗೌಡ, ಮಾಜಿ ಅಧ್ಯಕ್ಷ ಪಟೇಲ್ ಗರುಡಪ್ಪ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಸುದರ್ಶನ್, ಎಚ್.ವಿ.ರಾಮಪ್ಪ ಗೌಡ, ಪ್ರಮುಖರಾದ ರತ್ನಾಕರ್ ಕುಂಟಗೆ, ಅಂಕಿತ ಮಕೇರಿ, ಎ.ಎನ್.ಆದಿರಾಜ್, ಪ್ರಕಾಶ್, ಕೆ.ವೆಂಕಟೇಶ್ ಹೆಗ್ಡೆ, ಧರ್ಮಪ್ಪ ಗೌಡ, ವಾಟಗದ್ದೆ ದಿನೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net