ಮುಂದುವರಿದ ಕಾಡಾನೆಗಳ ಹಾವಳಿ | Elephant

ಸೊರಬ ತಾಲೂಕಿನ ದೂಗೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಅಡಕೆ ಗಿಡ ಮುರಿದಿರುವುದು.
ಸೊರಬ ತಾಲೂಕಿನ ದೂಗೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಅಡಕೆ ಗಿಡ ಮುರಿದಿರುವುದು.
Published on
ಸೊರಬ: ಅರಣ್ಯ ಇಲಾಖೆ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ನಡುವೆಯೂ ಕಾಡಾನೆಗಳರೆಡು ದಿಕ್ಕು ತಪ್ಪಿಸಿ ರೈತರ ಅಡಕೆ, ಬಾಳೆ ಬೆಳೆ, ಪೈಪ್‌ಲೈನ್‌ಗಳನ್ನು ಹಾಳು ಮಾಡುತ್ತಿವೆ.
ಕಾಡಾನೆಗಳ ಸೆರೆಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಲೇ ಇದ್ದಾರೆ. ಆದರೆ ತೋಟಗಳ ಮೇಲೆ ದಾಳಿ ಮಾತ್ರ ನಿಂತಿಲ್ಲ. ಇದನ್ನು ನೋಡಿ ರೈತರು ಕುಗ್ಗಿ ಹೋಗಿದ್ದಾರೆ.
ತಾಲೂಕಿನ ಉಳವಿ ಹೋಬಳಿಯ ಬರಗಿ, ದೂಗೂರು, ಭದ್ರಾಪುರ, ಉಳವಿ, ಹೊರಬೈಲು, ಮಳಲಗದ್ದೆ ಭಾಗದಲ್ಲಿ ಓಡಾಡುತ್ತಲೇ ಇವೆ. ಅರಣ್ಯ ಇಲಾಖೆಯ ಕಾರ್ಯಾಚರಣೆಯ ದಿಕ್ಕು ತಪ್ಪುವಂತೆ ಮಾಡುತ್ತಿವೆ. ಬುಧವಾರ ಸಂಜೆ ಉಳವಿ ಗ್ರಾಮದ ಪ್ರಶಾಂತ್ ಎಂಬುವರ ದೂಗೂರು ಜಮೀನಿನಲ್ಲಿ 60-70 ಅಡಕೆ, ಬಾಳೆ ಗಿಡಗಳು, ಪೈಪ್‌ಲೈನ್ ಹಾಳು ಮಾಡಿವೆ. ಗುರುವಾರ ಬರಗಿ ಹಲಿಸಿನಕೊಪ್ಪದ ಹೊಳೆಕೊಪ್ಪ ಅರಣ್ಯದ ಕಡೆಗೆ ಸಾಗಿವೆ. ಆನೆಯ ಪಾದದ ಗುರುತು, ಲದ್ದಿ ದೊರೆತ ಪರಿಣಾಮ ಗುರುವಾರ ಹಲಸಿನಕೊಪ್ಪ ಮತ್ತು ಬರಗಿ ಕಾಡಿನಲ್ಲಿ ಅರಣ್ಯ ಸಿಬ್ಬಂದಿ ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳು ಮಾತ್ರ ಪತ್ತೆಯಾಗಿಲ್ಲ
ಉಳವಿ ಹೋಬಳಿಯ ಕಾಡಂಚಿನಲ್ಲಿ ಕಬ್ಬು, ಭತ್ತ, ಅಡಕೆ ಹಾಗೂ ಬಾಳೆ ಮೊದಲಾದ ಬೆಳೆಗಳನ್ನು ಅಧಿಕವಾಗಿ ಬೆಳೆಯಲಾಗುತ್ತದೆ. ಹಾಗಾಗಿ ಆನೆಗಳು ಎಲ್ಲಿಯೂ ಕದಲದೆ ರಾತ್ರಿ ವೇಳೆ ತೋಟಗಳಿಗೆ ದಾಳಿ ಮಾಡುತ್ತಿವೆ. ಈ ಭಾಗದ ರೈತರು ಹಗಲೂ ರಾತ್ರಿ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಬೆಳೆಹಾನಿಯಾದ ಪ್ರದೇಶಕ್ಕೆ ಸಾಗರ ಡಿಎಫ್‌ಒ ಮೋಹನ್‌ಕುಮಾರ್, ವಲಯ ಅರಣ್ಯಾಧಿಕಾರಿ ಶ್ರೀಪಾದ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net