ಎಂ.ಎಸ್ಸಿ ಬಯೋಟೆಕ್ನಾಲಜಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಜನರಲ್ ಕೆಮಿಸ್ಟ್ರಿ ಹಾಗೂ ಎಂಎ ರಾಜ್ಯಶಾಸ್ತ್ರ ಕೋರ್ಸ್‌ಗಳ ಪ್ರವೇಶಾತಿಗೆ ತಕ್ಷಣವೇ ಅವಕಾಶ ಕಲ್ಪಿಸಬೇಕು. 75 ವರ್ಷಗಳಿಂದ ಸಹ್ಯಾದ್ರಿ ಕಾಲೇಜು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುತ್ತಿದೆ. ಇತ್ತೀಚೆಗೆ ಬಯೋಟೆಕ್ನಾಲಜಿಯಲ್ಲಿ ವಿವಿಯ 10 ರ‌್ಯಾಂಕ್‌ಗಳಲ್ಲಿ 5 ಹಾಗೂ ರಾಜ್ಯಶಾಸ್ತ್ರದಲ್ಲಿ ಎರಡು ರ‌್ಯಾಂಕ್‌ಗಳನ್ನು ಸಹ್ಯಾದ್ರಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಪಡೆದಿದ್ದಾರೆ. ಕಾಯಂ ಪ್ರಾಧ್ಯಾಪಕರನ್ನೇ ಹೊಂದಿರುವ ಈ ಕೋರ್ಸ್‌ಗಳಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊರೆ ಇರಲಿಲ್ಲ. ಆದರೂ ಪ್ರವೇಶಾತಿ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.