ತಾಳಗುಪ್ಪಕ್ಕೆ ಭೇಟಿ ನೀಡಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರೊಂದಿಗೆ ಸಿದ್ದಾಪುರ ರೈಲ್ವೆ ಹೋರಾಟ ಸಮಿತಿ ಸದಸ್ಯರು ತಾಳಗುಪ್ಪ ಹುಬ್ಬಳ್ಳಿ ಸಂಪರ್ಕದ ರೈಲು ಮಾರ್ಗ ರಚನೆ ಕುರಿತು ಸಮಾಲೋಚಿಸಿದರು. ಹರತಾಳು ಹಾಲಪ್ಪ, ವಾಸುದೇವ ಬಿಳಗಿ, ನಾಗರಾಜ ದೋಶೆಟ್ಟಿ, ಗುರುನಾಥ ವೆರ್ಣೇಕರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ
ರೈಲ್ವೆ ಹೋರಾಟ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ
ತಾಳಗುಪ್ಪ - ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣ ಖಚಿತ
ತಾಳಗುಪ್ಪ: ತಾಳಗುಪ್ಪ ಹುಬ್ಬಳ್ಳಿ ಸಂಪರ್ಕದ ರೈಲು ಮಾರ್ಗ ಖಚಿತವಾಗಿ ಆಗುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು. ತಾಳಗುಪ್ಪ ರೈಲ್ವೆ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ವೀಕ್ಷಣೆಗಾಗಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಸಿದ್ದಾಪುರ ರೈಲ್ವೆ ಹೋರಾಟ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.
2023&24ರ ಬಜೆಟ್ನಲ್ಲಿ 3.93 ಕೋಟಿ ರೂ. ವೆಚ್ಚದಲ್ಲಿ ತಾಳಗುಪ್ಪ ಹುಬ್ಬಳ್ಳಿ ರೈಲುಮಾರ್ಗ ನಿರ್ಮಿಸಲು ಸಮೀೆ ನಡೆದು ಟೆಂಡರ್ ಪಡೆದ ಹೈದರಾಬಾದ್ ಮೂಲದ ಕಂಪನಿ ಎಫ್ಎಸ್ಎಲ್ ವರದಿ ಸಲ್ಲಿಸಿದೆ. ರೈಲ್ವೆ ಇಲಾಖೆ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಪ್ರಯತ್ನ ನಡೆಸುತ್ತಿದ್ದು ರೈಲು ಮಾರ್ಗ ನಿರ್ಮಾಣ ಖಂಡಿತ ಆಗುತ್ತದೆ. ಈ ಕುರಿತು ಸಂಶಯ ಬೇಡ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಸಿದ್ದಾಪುರ ರೈಲ್ವೆ ಹೋರಾಟ ಸಮಿತಿಯ ವಾಸುದೇವ ಬಿಳಗಿ, ನಾಗರಾಜ ದೋಶೆಟ್ಟಿ, ಗುರುನಾಥ ವೆರ್ಣೇಕರ್, ವೆಂಕಟರಮಣ ಮಡಿವಾಳ, ಕಾಶಿನಾಥ ಗುಡಿಗಾರ, ಗಣಪತಿ ಹೆಗಡೆ, ಪ್ರಸನ್ನ ಕೆರೆಕೈ, ರಾಜಶೇಖರ ಗಾಳಿಪುರ, ಮಲ್ಲಿಕಾರ್ಜುನ ಹಕ್ರೆ, ಮೋಹನ ಶೇಟ್ ಮತ್ತಿತರರಿದ್ದರು.