ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆಸಿ

ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಗ್ರಾಪಂ ಸದಸ್ಯರುಗಳ ಮಹಾಒಕ್ಕೂಟ ಹಾಗೂ ಸಾಗರ ತಾಲೂಕು ನಾಗರಿಕ ಹಿತರಣಾ ಸಮಿತಿ ಪ್ರಮುಖರು ಸಾಗರದ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತೀ.ನ.ಶ್ರೀನಿವಾಸ್​, ಮಲ್ಲಿಕಾರ್ಜುನ ಹಕ್ರೆ, ಎಸ್​.ವಿ.ಹಿತಕರ ಜೈನ್​ ಇತರರಿದ್ದರು.
ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಗ್ರಾಪಂ ಸದಸ್ಯರುಗಳ ಮಹಾಒಕ್ಕೂಟ ಹಾಗೂ ಸಾಗರ ತಾಲೂಕು ನಾಗರಿಕ ಹಿತರಣಾ ಸಮಿತಿ ಪ್ರಮುಖರು ಸಾಗರದ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತೀ.ನ.ಶ್ರೀನಿವಾಸ್​, ಮಲ್ಲಿಕಾರ್ಜುನ ಹಕ್ರೆ, ಎಸ್​.ವಿ.ಹಿತಕರ ಜೈನ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಗರಿಕ ಹಿತರಣಾ ಸಮಿತಿ ಪ್ರಮುಖರ ಪ್ರತಿಭಟನೆ
  • ರಾಜ್ಯ ಗ್ರಾಪಂ ಸದಸ್ಯರುಗಳ ಮಹಾ ಒಕ್ಕೂಟ ಆಗ್ರಹ
  • ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆಸಿ
ಸಾಗರ: ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಆಗ್ರಹಿಸಿ ರಾಜ್ಯ ಗ್ರಾಪಂ ಸದಸ್ಯರುಗಳ ಮಹಾ ಒಕ್ಕೂಟ, ಸಾಗರ ತಾಲೂಕು ನಾಗರಿಕ ಹಿತರಣಾ ಸಮಿತಿ ಪ್ರಮುಖರು ಗುರುವಾರ ಉಪವಿಭಾಗಾ-ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಐದು ವರ್ಷದಿಂದ ಸ್ಥಳಿಯ ಸಂಸ್ಥೆ ಮತ್ತು ಪಂಚಾಯತ್​ರಾಜ್​ ಸಂಸ್ಥೆಗಳ ಚುನಾವಣೆ ನಡೆಸದೆ ರಾಜ್ಯ ಸರ್ಕಾರ, ಚುನಾವಣಾ ಆಯೋಗ ಸಂವಿಧಾನಕ್ಕೆ ಅಪಚಾರ ಮಾಡಿವೆ. ಎಲ್ಲ ರಾಜಕೀಯ ಪಕ್ಷಗಳ ಶಾಸಕರು ಕೆಟ್ಟ ಉದ್ದೇಶಗಳಿಂದ ಚುನಾವಣೆ ನಡೆಯದಂತೆ ತಡೆಯುತ್ತಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆಕ್ರೋಶ ವ್ಯಕ್ತಪಡಿಸಿದರು.
ಸಾಗರ ತಾಲೂಕು ನಾಗರಿಕ ಹಿತರಣಾ ಸಮಿತಿ ಸಂಚಾಲಕ ಎಸ್​.ವಿ.ಹಿತಕರ ಜೈನ್​ ಮಾತನಾಡಿ, ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆಸದಿರುವ ಕಾರಣ ಸ್ಥಳಿಯ ನಾಯಕತ್ವಕ್ಕೆ ಧಕ್ಕೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಜನಪ್ರತಿನಿಧಿಗಳ ಆಡಳಿತಾವಧಿ ಮುಗಿಯುವ ಒಂದು ತಿಂಗಳ ಮುಂಚಿತವಾಗಿ ಚುನಾವಣೆ ಪ್ರಕ್ರಿಯೆ ಆರಂಭಿಸಿ ಆಡಳಿತದ ಮುಕ್ತಾಯದ ದಿನವೇ ಹೊಸ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮಲೆನಾಡು ರೈತ ಸಂಟನೆಯ ತೀ.ನ.ಶ್ರೀನಿವಾಸ್​ ಮಾತನಾಡಿ, ಶಾಸಕರು, ಸಂಸದರ ಚುನಾವಣೆಗಳನ್ನು ನಿಗದಿತ ಅವಧಿಗೂ ಮುನ್ನ ಪೂರ್ವಭಾವಿಯಾಗಿ ನಡೆಸುತ್ತಾರೆ. ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.
ಸಾಗರ ತಾಪಂ ಮಾಜಿ ಉಪಾಧ್ಯ ಅಶೋಕ್​ ಬರದವಳ್ಳಿ, ರೈತ ಸಂದ ತಾಲೂಕು ಅಧ್ಯ ಮಂಜಪ್ಪ ಹಿರೆನೆಲ್ಲೂರು, ತಾಪಂ ಮಾಜಿ ಅಧ್ಯ ಲಕ್ಷಿ$್ಮನಾರಾಯಣ, ಪರಮೇಶ್ವರ ದೂಗೂರು, ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟದ ತಾಲೂಕು ಅಧ್ಯ ಉದಯಕೃಷ್ಣ, ಬಿಜೆಪಿ ಸಾಗರ ತಾಲೂಕು ಅಧ್ಯ ದೇವೇಂದ್ರಪ್ಪ ಯಲಕುಂದ್ಲಿ, ವೆಂಕಟೇಶ್​ ಮೆಳವರಿಗೆ, ಪ್ರತಾಪ, ಬದ್ರೇಶ್​, ಚಂದ್ರಶೇಖರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net