ಹೊಳೆಹೊನ್ನೂರು: ಅನ್ಯ ಭಾಷೆಗಳನ್ನು ಪ್ರೀತಿಸಿ ಮಾತೃಭಾಷೆ ಆರಾಧಿಸುವುದನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದು ಎಪಿಎಂಸಿ ಮಾಜಿ ಸದಸ್ಯ ಎಸ್.ಆರ್.ಸತೀಶ್ ಹೇಳಿದರು.
ಸಮೀಪದ ಸಿದ್ಲೀಪುರದಲ್ಲಿ ಗ್ರಾಮಸ್ಥರು ಹಾಗೂ ಯುವಕ ಮಂಡಳಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ದೈನಂದಿನ ವ್ಯವಹಾರಗಳನ್ನು ಕನ್ನಡ ಭಾಷೆಯಲ್ಲೇ ಮಾಡಬೇಕು. ಜಾತಿ ಮತಗಳನ್ನು ಮೀರಿ ಕನ್ನಡಿಗರು ನಾವೆಲ್ಲ ಒಂದೇ. ಪಾಲಕರು ಕನ್ನಡ ಶಾಲೆಗೆ ಮಕ್ಕಳನ್ನು ದಾಖಲಿಸಲು ಮುಂದಾಗಬೇಕು. ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡ ಭಾಷೆಯಲ್ಲಿ ಸಂವಹನ ನಡೆಸಬೇಕು ಎಂದು ತಿಳಿಸಿದರು.