ಈ ವರ್ಷ ಮುಂಗಾರಿಗೆ ಜಿಲ್ಲೆಯಲ್ಲಿ 45,807 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಇದುವರೆಗೆ 5,485 ಹೆಕ್ಟೇರ್‌ನಲ್ಲಿ ಮಾತ್ರ ಮೆಕ್ಕೆಜೋಳ ಬಿತ್ತನೆಯಾಗಿದೆ. ಭತ್ತ 66,200 ಹೆಕ್ಟೇರ್ ಪೈಕಿ 2,415 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 105, ಭದ್ರಾವತಿಯಲ್ಲಿ 60, ಸಾಗರದಲ್ಲಿ 50, ಹೊಸನಗರ 20, ಶಿಕಾರಿಪುರದಲ್ಲಿ 3,500, ಸೊರಬದಲ್ಲಿ 1,750 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ. ಈಗ ಮೆಕ್ಕೆಜೋಳಕ್ಕೆ ಮಳೆ ಬಾರದಿದ್ದರೆ ಬಿತ್ತನೆಯಾಗಿರುವ ಮೆಕ್ಕೆಜೋಳ ಮಣ್ಣುಪಾಲಾಗಲಿದೆ. ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಈಗ ಅನುಭವಿಸುವ ನಷ್ಟಕ್ಕೆ ವಿಮೆ ಪರಿಹಾರವೂ ಸಿಗುವುದಿಲ್ಲ. ಮೆಕ್ಕೆಜೋಳ ಬೆಳೆಗಾರರಿಗೆ ಹೆಚ್ಚು ನಷ್ಟದ ಆಂತಕ ಶುರುವಾಗಿದೆ.