ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ರಂಗಪ್ಪ ವೃತ್ತದಿಂದ ಮಾಧವಾಚಾರ್ ವೃತ್ತದವರೆಗೆ ಅಳತೆ ಮಾಡಲು ಮುಂದಾಗಿದ್ದರು. ರಸ್ತೆ ಮಧ್ಯ ಗುರುತು ಮಾಡುವಾಗ ಕಟ್ಟಡಗಳ ಮಾಲೀಕರು ವಾಗ್ವಾದ ನಡೆಸಿದರು. ರಸ್ತೆ ಅಳತೆಯನ್ನು ಮಾಧವಾಚಾರ್ ವೃತ್ತದಿಂದ ಮಾಡಬೇಕು. ಆದರೆ ರಂಗಪ್ಪ ವೃತ್ತದಿಂದ ಮಾಡುತ್ತಿರುವುದು ಸರಿಯಲ್ಲ. ಕೆಳಗಿನ ಮಾಧವಾಚಾರ್ ವೃತ್ತದಿಂದ ಮೇಲಿನ ರಂಗಪ್ಪವೃತ್ತದವರೆಗೂ ಅಳತೆ ಮಾಡಿ ಎಂದು ಕೆಲವರು ಮಾತಿನ ಚಕಮಕಿ ನಡೆಸಿದರು. ಅದಕ್ಕೆ ಅಧಿಕಾರಿಗಳು ಬಗ್ಗದೆ ಎಲ್ಲ ಕಡೆಗಳಲ್ಲೂ ಅಳತೆ ಮಾಡುತ್ತೇವೆ. ನಮಗೆ ಕೆಲಸ ಮಾಡಲು ಬಿಡಿ ಎಂದು ಕಟ್ಟಡ ಮಾಲೀಕರಿಗೆ ತಿಳಿ ಹೇಳಿದರು. ನಂತರ ಗುರುತಿಸುವ ಕಾರ್ಯ ಸರಾಗವಾಗಿ ನಡೆಯಿತು.