ಖರ್ಗೆ ಸಭೆ ನಡೆಸಿದ ಸ್ಥಳ ಶುದ್ಧೀಕರಣ ಅಕ್ಷಮ್ಯI kharge meeting
ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಘಟನೆ ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಆರ್.ಪ್ರಸನ್ನಕುಮಾರ್ ಮಾತನಾಡಿದರು. ಎನ್.ರಮೇಶ್, ಚೇತನ್, ಶ್ವೇತಾ ಬಂಡಿ, ವಿಜಯಕುಮಾರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಿವಮೊಗ್ಗದಲ್ಲಿ ಕೈ ಮುಖಂಡರ ಆಕ್ರೋಶ
ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು
ಶಿವಮೊಗ್ಗ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (kharge) ಅವರು ಸಭೆ (meeting) ನಡೆಸಿದ ಸ್ಥಳ ಅಶುದ್ಧವಾಗಿದೆ ಎಂದು ಗಂಗಾಜಲ ಸಿಂಪಡಿಸಿದ ಶುದ್ಧಗೊಳಿಸಿದ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಸೋಮವಾರ ಶಿವಮೊಗ್ಗದಲ್ಲಿ ಪ್ರತಿಭಟನೆ (protest) ನಡೆಸಿದರು.
ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಗಂಗಾಜಲದಿಂದ ಶುದ್ಧೀಕರಿಸಿದ ಘಟನೆ ಅಕ್ಷಮ್ಯ. ದೇಶದ ಹಿರಿಯ ನಾಯಕರೊಬ್ಬರು ಭಾಗವಹಿಸಿದ ಸಭೆಯ ಸ್ಥಳವನ್ನು ಜಾತಿ ಆಧಾರದ ಮೇಲೆ ಅವಮಾನಿಸುವುದು ಖಂಡನೀಯ. ಇದು ಸಂವಿಧಾನ ಮೌಲ್ಯಗಳ ಮೇಲಿನ ನೇರ ದಾಳಿ. ಬಿಜೆಪಿಯವರ ಸಂಕುಚಿತ ಮನಸ್ಥಿತಿ ಈ ಘಟನೆಯಿಂದ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ದೂರಿದರು.
ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಇಂತಹ ಹೇಯ ಕೃತ್ಯ ನಡೆಸಿರುವುದು ಖಂಡನೀಯ. ದೇಶಕ್ಕೆ ಸ್ವಾತಂತ್ರೃ ಬಂದು ಏಳು ದಶಕಗಳ ಬಳಿಕವೂ ಇಂತಹ ಘಟನೆಗಳು ನಡೆಯುತ್ತಿರುವುದು ದೇಶಕ್ಕೆ ಅವಮಾನ. ಕಾಂಗ್ರೆಸ್ ಪಕ್ಷ ಇದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಜವಳಿ ನಿಗಮದ ಅಧ್ಯಕ್ಷ ಚೇತನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ಪ್ರಮುಖರಾದ ಎಸ್.ಟಿ.ಚಂದ್ರಶೇಖರ್, ವಿಜಯಕುಮಾರ್, ವೇದಾ ವಿಜಯಕುಮಾರ್, ಭಾರತಿ ರಾಮಕೃಷ್ಣ, ನೇತ್ರಾವತಿ ಗೌಡ, ಪಾಲಾಕ್ಷಿ, ಎಸ್.ಟಿ.ಹಾಲಪ್ಪ, ಎಚ್.ಸಿ.ಯೋಗೀಶ್, ಮಧುಸೂದನ್ ಇತರರಿದ್ದರು.