ಎಚ್.ಎಸ್.ಮಂಜಪ್ಪಗೆ ನಾಗರಿಕ ಸನ್ಮಾನ

ಎಚ್.ಎಸ್.ಮಂಜಪ್ಪ
ಎಚ್.ಎಸ್.ಮಂಜಪ್ಪ
Published on
ಸಾಗರ: ಹಿರಿಯ ಸಹಕಾರಿ, ಅಡಿಕೆ ಬೆಳೆಗಾರರ ಹಿತಚಿಂತಕ ಎಚ್.ಎಸ್.ಮಂಜಪ್ಪ ಅವರಿಗೆ ಜೂ.6ರಂದು ಬೆಳಗ್ಗೆ 10.30ಕ್ಕೆ ಎಲ್‌ಬಿ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಹೊಸಬಾಳೆ ಎಚ್.ಎಸ್.ಮಂಜಪ್ಪ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕಾ ಹೇಳಿದರು.
ಐದು ದಶಕಗಳಿಂದ ಅಡಿಕೆ ಬೆಳೆಗಾರರ ಪರವಾಗಿ ಎಚ್.ಎಸ್.ಮಂಜಪ್ಪ ಅವರು ಮಾಡಿರುವ ಹೋರಾಟ ಗುರುತಿಸಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ವಿಶೇಷ ನಾಗರಿಕ ಸನ್ಮಾನ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸನ್ಮಾನಿಸುವರು. ಶಾಸಕ ಆರಗ ಜ್ಞಾನೇಂದ್ರ ಅಭಿನಂದನಾ ಭಾಷಣ ಮಾಡುವರು. ಶಾಸಕ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿ.ಆರ್.ಜಯಂತ್ ಉಪಸ್ಥಿತರಿರುವರು. ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸುವರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಅಶೋಕ್ ನಾಯ್ಕ, ಮಹೇಶ್ ಹುಲ್ಕುಳಿ, ಇಂದೂಧರ ಬೇಸೂರು ಭಾಗವಹಿಸುವರು ಎಂದರು.
ವ.ಶಂ.ರಾಮಚಂದ್ರ ಭಟ್, ಚೇತನರಾಜ್ ಕಣ್ಣೂರು, ಪ್ರಸನ್ನ ಕೆರೆಕೈ, ರಾಜೇಂದ್ರ ಖಂಡಿಕಾ, ಯು.ಎಚ್.ರಾಮಪ್ಪ, ರವಿಕುಮಾರ್, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net