13ಕ್ಕೆ ಉದ್ಯಮಿ ಅಶ್ವತ್ಥ್‌ನಾರಾಯಣ ಶೆಟ್ಟಿಗೆ ನಾಗರಿಕ ಅಭಿನಂದನೆ | Ashwathnarayana Shetty

ಟಿ.ಆರ್.ಅಶ್ವತ್ಥ್‌ನಾರಾಯಣ ಶೆಟ್ಟಿ ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಡಾ. ಪಿ.ನಾರಾಯಣ ಮಾತನಾಡಿದರು. ಕೆ.ಬಸಪ್ಪ ಗೌಡ, ಡಾ. ಸತೀಶ್‌ಕುಮಾರ್ ಶೆಟ್ಟಿ, ಉಮೇಶ್ ಆರಾಧ್ಯ,  ಎಚ್.ಯು.ವೈದ್ಯನಾಥ್, ಸಿ.ಎಂ.ನೃಪತುಂಗ ಸುದ್ದಿಗೋಷ್ಠಿಯಲ್ಲಿದ್ದರು.
ಟಿ.ಆರ್.ಅಶ್ವತ್ಥ್‌ನಾರಾಯಣ ಶೆಟ್ಟಿ ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಡಾ. ಪಿ.ನಾರಾಯಣ ಮಾತನಾಡಿದರು. ಕೆ.ಬಸಪ್ಪ ಗೌಡ, ಡಾ. ಸತೀಶ್‌ಕುಮಾರ್ ಶೆಟ್ಟಿ, ಉಮೇಶ್ ಆರಾಧ್ಯ, ಎಚ್.ಯು.ವೈದ್ಯನಾಥ್, ಸಿ.ಎಂ.ನೃಪತುಂಗ ಸುದ್ದಿಗೋಷ್ಠಿಯಲ್ಲಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೇವಾಶ್ರೀ ಅಭಿನಂದನಾ ಕಿರುಹೊತ್ತಗೆ ಬಿಡುಗಡೆ
  • ಅಭಿನಂದನಾ ಸನ್ಮಾನ ಸಮಿತಿ, ಶಿವಮೊಗ್ಗ ಸಿಟಿಜನ್ ಫೋರಂ ಸಹಯೋಗ
  • ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ್ ಸಂಕೇಶ್ವರ್ ಭಾಗಿ
ಶಿವಮೊಗ್ಗ: ಶಿವಮೊಗ್ಗದ ಸಿಟಿಜನ್ ಫೋರಂ(Citizen Forum) ಅಡಿ ಹಾಗೂ ಟಿ.ಆರ್.ಅಶ್ವತ್ಥ್‌ನಾರಾಯಣ ಶೆಟ್ಟಿ ಅಭಿನಂದನಾ ಸಮಿತಿಯಿಂದ ಜೂ.13ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಮಾಜಮುಖಿ, ಬಹುಮುಖ ವ್ಯಕ್ತಿತ್ವದ ಉದ್ಯಮಿ ಟಿ.ಆರ್.ಅಶ್ವತ್ಥ್‌ನಾರಾಯಣ ಶೆಟ್ಟಿ ಅವರಿಗೆ ನಾಗರಿಕ ಅಭಿನಂದನೆ(Citizen Congratulations) ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಡಾ. ಪಿ.ನಾರಾಯಣ ಹೇಳಿದರು.
ಶಿವಮೊಗ್ಗದ ಉದ್ಯಮಿ ಅಶ್ವತ್ಥ್‌ನಾರಾಯಣ ಶೆಟ್ಟಿ(Ashwathnarayana Shetty) ಅವರು 50 ವರ್ಷದಿಂದ ಟೆಕ್ಸ್‌ಟೈಲ್ ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ. ಅವರಿಗೆ ಶಿವಮೊಗ್ಗದ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸಲಾಗುತ್ತಿದೆ. ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಷಿ(Shri Bhimeshwar Joshi) ಕಾರ್ಯಕ್ರಮ ಉದ್ಘಾಟಿಸುವರು. ವಿಆರ್‌ಎಲ್ ಸಮೂಹ ಸಂಸ್ಥೆಯ ಸಿಎಂಡಿ, ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ್ (Dr.Vijay Sankeshwar) ಅವರು ಸೇವಾಶ್ರೀ ಅಭಿನಂದನಾ ಕಿರುಹೊತ್ತಗೆ ಬಿಡುಗಡೆ ಮಾಡುವರು. ಸಮಿತಿ ಗೌರವಾಧ್ಯಕ್ಷ ಎಸ್.ರುದ್ರೇಗೌಡ ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಬಲ್ಕೀಶ್ ಬಾನು, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಸಮಿತಿ ಪ್ರಧಾನ ಕಾರ್ಯದರ್ಶಿ, ಎಂಎಲ್‌ಸಿ ಡಿ.ಎಸ್.ಅರುಣ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಮಿತಿ ಕಾರ್ಯದರ್ಶಿ ಡಾ. ಸತೀಶ್‌ಕುಮಾರ್ ಶೆಟ್ಟಿ, ಸಹ ಸಂಚಾಲಕ ಉಮೇಶ್ ಆರಾಧ್ಯ, ಖಜಾಂಚಿ ಹರ್ಷ ಕಾಮತ್, ಸದಸ್ಯ ಎಸ್.ಬಿ.ಅಶೋಕ್‌ಕುಮಾರ್, ಕುಮಾರ ಶಾಸ್ತ್ರಿ, ಜಿ.ವಿಜಯಕುಮಾರ್, ಸಿ.ಎಂ.ನೃಪತುಂಗ ಸುದ್ದಿಗೋಷ್ಠಿಯಲ್ಲಿದ್ದರು.

ಬೆಳಗ್ಗೆ ಉಪನ್ಯಾಸ, ರಕ್ತದಾನ ಶಿಬಿರ

ಬೆಳಗ್ಗೆ 10.30ಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಭಾರತದಲ್ಲಿ ಕುಟುಂಬ ವ್ಯವಹಾರ ನಿರ್ವಹಣೆ ಸವಾಲುಗಳು ಮತ್ತು ಭವಿಷ್ಯ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಯುಕೆ ಆ್ಯಂಡ್ ಕೋ ಸಂಸ್ಥಾಪಕ ಉಲ್ಲಾಸ್ ಕಾಮತ್ ಉಪನ್ಯಾಸ ನೀಡುವರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮುಖ್ಯ ಅತಿಥಿಯಾಗಿರುವರು. ಟಿ.ಆರ್.ಅಶ್ವತ್ಥ್‌ನಾರಾಯಣ ಶೆಟ್ಟಿ, ಎಂಎಲ್‌ಸಿ ಡಿ.ಎಸ್.ಅರುಣ್, ಉದ್ಯಮಿ ಭೂಪಾಳಂ ಶಶಿಧರ್, ಎ.ಎಂ.ಸುರೇಶ್ ಹಾಜರಿರುವರು. ಇದೇ ವೇಳೆ ರೆಡ್‌ಕ್ರಾಸ್ ಹಾಗೂ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಡಾ. ಪಿ.ನಾರಾಯಣ್ ತಿಳಿಸಿದರು.
"

84ರ ಹರೆಯದಲ್ಲೂ 40 ವಿವಿಧ ಸಂಘಸಂಸ್ಥೆಗಳಲ್ಲಿ ಟಿ.ಆರ್.ಅಶ್ವತ್ಥ್‌ನಾರಾಯಣ ಶೆಟ್ಟಿ ಸಕ್ರಿಯರಾಗಿದ್ದು, ನಾಗರಿಕ ಅಭಿನಂದನೆಗೂ ಮುನ್ನ 8 ನಿಮಿಷದ ರೂಪಕ ಪ್ರಸ್ತುತಪಡಿಸಲಾಗುವುದು. ಭೋಜನ ವ್ಯವಸ್ಥೆ ಇರಲಿದೆ. ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ, ಅಶ್ವತ್ಥ ಪಥ- ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

— ಎಚ್.ಯು.ವೈದ್ಯನಾಥ್, ಸಮಿತಿ ಸಹ ಸಂಚಾಲಕ

"

ಟಿ.ಆರ್.ಅಶ್ವತ್ಥ್‌ನಾರಾಯಣ ಶೆಟ್ಟಿ ಅವರು ಹತ್ತು ಹಲವು ಸಂಘಸಂಸ್ಥೆಗಳಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ನಾಗರಿಕ ಅಭಿನಂದನೆ ಸಲ್ಲಿಸುವುದು ಅರ್ಹವೇ ಆಗಿದೆ.

— ಕೆ.ಬಸಪ್ಪ ಗೌಡ, ಶಿವಮೊಗ್ಗ ಸಿಟಿಜನ್ ಫೋರಂ ಅಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net