ಪ್ರಾಯೋಗಿಕ ಶಿಕ್ಷಣದತ್ತ ಮಕ್ಕಳ ಒಲವು | Teachers' Workshop

ಕುಮದ್ವತಿ ರೆಸಿಡೆನ್ಷಿಯಲ್ ಸೆಂಟ್ರಲ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಉದ್ಘಾಟಿಸಿದರು. ಶಶಿಧರ ಕುಲಕರ್ಣಿ, ಆರ್.ಎಸ್. ಸುರೇಶ್, ಆರ್.ಎಸ್.ಸುರೇಶ್ ಇತರರಿದ್ದರು.
ಕುಮದ್ವತಿ ರೆಸಿಡೆನ್ಷಿಯಲ್ ಸೆಂಟ್ರಲ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಉದ್ಘಾಟಿಸಿದರು. ಶಶಿಧರ ಕುಲಕರ್ಣಿ, ಆರ್.ಎಸ್. ಸುರೇಶ್, ಆರ್.ಎಸ್.ಸುರೇಶ್ ಇತರರಿದ್ದರು.
Published on
ಶಿಕಾರಿಪುರ: ವಿಜ್ಞಾನ ಜ್ಞಾನದಾಹವನ್ನು ನೀಗಿಸುವ ಜತೆಗೆ ಅನ್ವೇಷಣೆ, ಸಂಶೋಧನೆಗಳ ಕಡೆಗೆ ನಮ್ಮ ಮನಸ್ಸು ವಾಲುವಂತೆ ಮಾಡುತ್ತದೆ ಎಂದು ಕುಮದ್ವತಿ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಹೇಳಿದರು.
ಶಿವಮೊಗ್ಗದ ಸಹ್ಯಾದ್ರಿ ಸಹೋದಯ ಸಂಕೀರ್ಣ ಸಂಸ್ಥೆ ಆಶ್ರಯದಲ್ಲಿ ಕುಮದ್ವತಿ ರೆಸಿಡೆನ್ಷಿಯಲ್ ಸೆಂಟ್ರಲ್ ಶಾಲೆಯಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿಜ್ಞಾನ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಕ್ಕಳು ಪ್ರಾಯೋಗಿಕ ಮತ್ತು ಆಧುನಿಕ ಕಲಿಕಾ ವಿಧಾನಗಳ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮುಧೋಳದ ಬಸವೇಶ್ವರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಶಶಿಧರ ಕುಲಕರ್ಣಿ, ಶ್ರೀ ಚನ್ನಮಲ್ಲಿಕಾರ್ಜುನ ಸಿಬಿಎಸ್‌ಜಿ ಶಾಲೆ ಪ್ರಾಚಾರ್ಯ ಆರ್.ಎಸ್.ಸುರೇಶ್ ಭಾಗವಹಿಸಿದ್ದರು. ಪ್ರಾಚಾರ್ಯ ಎಚ್.ಡಿ.ಪ್ರಶಾಂತ್, ಆರ್.ಪ್ರಭು, ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯನಿರ್ವಹಣಾ ಸಂಯೋಜಕ ಕುಬೇರಪ್ಪ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net