ಕಲಿಕಾ ಹಬ್ಬದಿಂದ ಮಕ್ಕಳಿಗೆ ಪ್ರೇರಣೆ | school programe

ಸೊರಬ ತಾಲೂಕಿನ ಹಾಲಗಳಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಗ್ಗಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಅಂಗವಾಗಿ ಮಕ್ಕಳು ಮತ್ತು ಪಾಲಕರು ಕುಂಭ ಹೊತ್ತು ಮೆರವಣಿಗೆ ನಡೆಸಿದರು. ಎಚ್.ಬಿ.ರಮೇಶ್, ಶಶಿಧರ, ಭಾರತಿ ಇತರರಿದ್ದರು.
ಸೊರಬ ತಾಲೂಕಿನ ಹಾಲಗಳಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಗ್ಗಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಅಂಗವಾಗಿ ಮಕ್ಕಳು ಮತ್ತು ಪಾಲಕರು ಕುಂಭ ಹೊತ್ತು ಮೆರವಣಿಗೆ ನಡೆಸಿದರು. ಎಚ್.ಬಿ.ರಮೇಶ್, ಶಶಿಧರ, ಭಾರತಿ ಇತರರಿದ್ದರು.
Published on
ಸೊರಬ: ಕಲಿಕಾ ಹಬ್ಬವು ಮಕ್ಕಳನ್ನು ಕಲಿಕೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೆಗ್ಗೋಡು ಗ್ರಾಪಂ ಉಪಾಧ್ಯಕ್ಷ ಎಚ್.ಬಿ.ರಮೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಹಾಲಗಳಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಗ್ಗಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆ ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆ. ಪಾಲಕರು ಸಹಕಾರವೂ ಕಲಿಕೆಗೆ ಅಗತ್ಯ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಪಾಲಕರು ಪಾಲ್ಗೊಂಡಿದ್ದಾರೆ. ಇಲಾಖೆಯು ಅರ್ಥಪೂರ್ಣವಾಗಿ ಕಾರ್ಯಕ್ರಮ ಆಚರಿಸುತ್ತಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಶಶಿಧರ ಮಾತನಾಡಿ, ಕಾರ್ಯಕ್ರಮವನ್ನು ಉತ್ತಮವಾಗಿಸಲು ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸದಸ್ಯರು ಅವಿರತವಾಗಿ ಶ್ರಮಿಸಿದ್ದಾರೆ. ಗ್ರಾಮದಲ್ಲಿ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಿದ್ದೇವೆ ಎಂದು ಹೇಳಿದರು.
ಸಿಆರ್‌ಪಿ ವೀರನ ಗೌಡ ಮಾತನಾಡಿ, ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ಸಂಸ್ಕೃತಿ ಪರಿಚಯ, ಚಿತ್ರಕಲೆ, ಮಣ್ಣಿನ ಮಾದರಿ ತಯಾರಿಕೆ, ನಾಟಕಗಳ ಮೂಲಕ ಮಕ್ಕಳ ಸೃಜನಶೀಲ ಶಕ್ತಿಯನ್ನು ಉತ್ತೇಜಿಸಲಾಗುತ್ತದೆ ಎಂದರು.
ಸಂಜೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮ ಸಮಿತಿ ಅಧ್ಯಕ್ಷ ಮುದ್ದಪ್ಪ ಹಂಡಿ, ಸದಸ್ಯರಾದ ದೇವೇಂದ್ರಪ್ಪ, ನಾಗರಾಜ್, ಮುದ್ದಪ್ಪ ವಿಠಲಪುರ್, ಎಂ.ಮೇಘರಾಜ್ ಗೌಡ್, ಗ್ರಾಪಂ ಸದಸ್ಯೆ ಭಾರತಿ, ಮಾಜಿ ಸದಸ್ಯ ಪರಶುರಾಮ್, ಮುಖ್ಯ ಶಿಕ್ಷಕ ಪ್ರಶಾಂತ್ ಸಾಗರ್, ಶಿಕ್ಷಕ ಎಸ್.ರಾಘವೇಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net