30ರಂದು ರಥ ಸಮರ್ಪಣೆ ಸಂಭ್ರಮ

ಸೊರಬ ಪಟ್ಟಣದ ಶ್ರೀ ಲ$್ಮ ರಂಗನಾಥ ಸ್ವಾಮಿ ದೇಗುಲದ ಸಮರ್ಪಣೆಗೆ ಸಜ್ಜಾಗಿರುವ ನೂತನ ರಥ.
ಸೊರಬ ಪಟ್ಟಣದ ಶ್ರೀ ಲ$್ಮ ರಂಗನಾಥ ಸ್ವಾಮಿ ದೇಗುಲದ ಸಮರ್ಪಣೆಗೆ ಸಜ್ಜಾಗಿರುವ ನೂತನ ರಥ.
Published on

ಪ್ರಮುಖ ಮುಖ್ಯಾಂಶಗಳು

  • 24ರಿಂದ 30ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
  • ಸುಣ್ಣ&ಬಣ್ಣಗಳಿಂದ ದೇವಾಲಯ ಅಲಂಕೃತ
  • 30ರಂದು ರಥ ಸಮರ್ಪಣೆ ಸಂಭ್ರಮ
ಶಿವಪ್ಪ ಹಿತ್ಲರ್​ ಸೊರಬ
ಪಟ್ಟಣದ ಶ್ರೀ ಲ$್ಮರಂಗನಾಥ ಸ್ವಾಮಿ ದೇವರ ನೂತನ ಬ್ರಹ್ಮ ರಥ ಸಮರ್ಪಣಾ ಮಹೋತ್ಸವ ಕಾರ್ಯಕ್ರಮ ಮಾ.30ರಂದು ನಡೆಯಲಿದೆ.
150 ವರ್ಷಗಳ ಹಿಂದೆ ನಿಮಾರ್ಣವಾಗಿದ್ದ ರಥ ಕಳೆದ 10 ವರ್ಷಗಳ ಹಿಂದೆ ರಥೋತ್ಸವ ಸಂದರ್ಭದಲ್ಲಿ ಎಳೆಯಲು ಸಾಧ್ಯವಾಗದ ಸ್ಥಿತಿ ತಲುಪಿತ್ತು. ಇಂಥದ್ದೊಂದು ಬೆಳವಣಿಗೆಯಿಂದಾಗಿ ರಂಗನಾಥ ದೇವಸ್ಥಾನದಿಂದ ಪಟ್ಟಣದ ಮುಖ್ಯ ರಸ್ತೆಯ ಶ್ರೀವರದಾ ಹಸ್ತ ಅಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಾಗುತ್ತಿದ್ದ ರಥವನ್ನು ಸ್ವಲ್ಪವೇ ದೂರ ಎಳೆಯಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭಕ್ತರ ಸಂಭ್ರಮಕ್ಕೆ ಧಕ್ಕೆ ಉಂಟಾಗಿತ್ತು. ಈ ಬೆಳವಣಿಗೆ ಭಕ್ತರಲ್ಲಿ ಬೇಸರ ಮೂಡಿಸಿತ್ತು.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನದ ರಥವು ಕಳೆದ ಒಂದು ದಶಕದಿಂದ ಶಿಥಿಲಗೊಂಡಿದ್ದರಿಂದ ರಥೋತ್ಸವದಲ್ಲಿ ನಿರಾಸಕ್ತಿ ಮೂಡಿಸಿತ್ತು. ಇದೀಗ ನೂತನ ರಥ ನಿರ್ಮಾಣಗೊಂಡಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.
ರಥದ ಸಮಸ್ಯೆ ಮನಗಂಡು ನೂತನ ರಥ ನಿರ್ಮಾಣಕ್ಕಾಗಿ 2021ರ ಸೆ.19ರಂದು ಒಂದು ಸಮಿತಿ ರಚಿಸಲಾಯಿತು. ನಾಲ್ಕೂವರೆ ವರ್ಷಗಳ ಹಿಂದೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ನೂತನ ರಥ ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು. ಶಿರಸಿಯ ಸಾಯಿ ಹ್ಯಾಂಡಿಕ್ರಾಫ್ಟ್​ ಸಂಸ್ಥೆಯ ಶಿಲ್ಪಿ ಪುರುಷೋತ್ತಮ ಗುಡಿಗಾರ್​ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ಇದೀಗ ಶಾಸ್ತ್ರೊಕ್ತವಾಗಿ 36 ಅಡಿ ಎತ್ತರದ ಶ್ರೀ ಲ$್ಮರಂಗನಾಥ ಬ್ರಹ್ಮ ರಥವು ಈ ಹಿಂದೆ ಇದ್ದಂತಹ ಮಾದರಿಯಲ್ಲೇ ನಿರ್ಮಾಣವಾಗಿದೆ.
36 ಅಡಿ ಎತ್ತರ, 14*14 ಅಡಿ ವ್ಯಾಸವುಳ್ಳ ರಥಕ್ಕೆ ಐದು ಜಾತಿಯ ಮರಗಳನ್ನು ಬಳಸಲಾಗಿದೆ. ಮಾ.30ರಂದು ನೂತನ ರಥದ ಸಮರ್ಪಣಾ ಮಹೋತ್ಸವ ಆಚರಿಸಲಾಗುತ್ತಿದೆ. ಇದಕ್ಕಾಗಿ ದೇವಾಲಯ ಸುಣ್ಣ ಬಣ್ಣಗಳಿಂದ ಅಲಂಕೃತಗೊಳಿಸಿ ವಿದ್ಯುತ್​ನಿಂದ ಅಲಂಕಾರ ಮಾಡಲಾಗುತ್ತಿದೆ. ಇಡೀ ಪಟ್ಟಣದಲ್ಲಿ ಸಂಭ್ರಮ ಮನೆ ಮಾಡಿದೆ.
24ರಂದು ಬೆಳಗ್ಗೆ ಮಂಗಳ ವಾದ್ಯದೊಡನೆ ಶ್ರೀ ರಂಗನಾಥ ಪ್ರಾರ್ಥನೆ, ಗಣಪತಿ ಪೂಜೆ, ಗೋಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ, 25ರಂದು ಋಗ್ವೇದ ಸಂಹಿತಾ ಮಹಾಯ ಹಾಗೂ ಚತುರ್ವೇದ ಪಾರಾಯಣ, ಪುರುಷ ಸೂಕ್ತ ಹೋಮ. 26ರಂದು ರುದ್ರ ಗಾಯತ್ರಿ ಹೋಮ, ಅಷ್ಟಾವಧಾನ ಸೇವೆ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. 27 ದುರ್ಗಹೋಮ, 28ಕ್ಕೆ ಸೌರಸೂಕ್ತ ಹೋಮ, ಮಧ್ಯಾಹ್ನ ಮಂಗಳ ವಾದ್ಯ ೂಷದೊಂದಿಗೆ ನೂತನ ಬ್ರಹ್ಮರಥದ ಪುರ ಪ್ರವೇಶ ಮಾಡಲಿದೆ. 29ಕ್ಕೆ ರಥ ಪರಿಗ್ರಹ, ರಥ ಶುದ್ಧಿ, ಶ್ರೀನಿವಾಸ ಕಲ್ಯಾಣೋತ್ಸವ, 30ರಂದು ಬೆಳಗ್ಗೆ ತತ್ವಾವಾಹನೇ ರಥ ಮೂಲ ಮಂತ್ರ ಹೋಮ, ರಥ ಸಂಪ್ರೋಣೆ ಹೋಮ, ಮಹಾರಥ ಸಮರ್ಪಣೆ ನಡೆಯಲಿದೆ.
ಸೊರಬದ ಇಹಾಸದಲ್ಲಿ ಇದೊಂದು ಸುವರ್ಣ ದಿನ. ಎಲ್ಲರ ಸಹಕಾರ ಮತ್ತು ಎಲ್ಲ ಸರ್ಕಾರಗಳ ನೆರವಿನಿಂದಾಗಿ ಶತಮಾನದಷ್ಟು ಪುರಾತನವಾದ ರಥೋತ್ಸವದ ಸಾಂಪ್ರದಾಯ ಮುಂದುವರಿಯುವಂತೆ ಆಗಿದೆ. ರಥದ ಲೋಕಾರ್ಪಣೆ ಒಂದು ಸುದಿನ. ಈ ಸಂದರ್ಭದಲ್ಲಿ ವಿದ್ವಾನ್​ ನಾರಾಯಣ ಭಟ್ಟರ ಶ್ರಮವನ್ನು ಭಕ್ತರು ಮರೆಯುವಂತಿಲ್ಲ.
> ಎಚ್​. ಗಣಪತಿ
ರಥ ಸಮರ್ಪಣಾ ಸಮಿತಿ ಅಧ್ಯ
ಹತ್ತಾರು ವರ್ಷಗಳಿಂದ ರಥ ನಿರ್ಮಾಣ ಮಾಡಬೇಕು ಎಂಬ ಭಕ್ತರ ಕನಸು ಇದೀಗ ನನಸಾಗುತ್ತಿದೆ. ಇದು ದೇವರ ಅನುಗ್ರಹ ಹಾಗೂ ಭಕ್ತರ ದೊಡ್ಡ ಸಹಕಾರದ ಲ. ಇದು ಪಟ್ಟಣ ಸೇರಿ ತಾಲೂಕಿನ ಭಕ್ತರಿಗೆ ಶುಭ ಸೂಚಕ.
> ವಿದ್ವಾನ್​ ನಾರಾಯಣ ಭಟ್​
ಶ್ರೀ ರಂಗನಾಥ ದೇವಾಲಯದ ಅರ್ಚಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net