ಸುವರ್ಣ ಮಹೋತ್ಸವ ಆಚರಣೆ ನಮ್ಮ ಹೆಮ್ಮೆ

ಶರಾವತಿ ವಿದ್ಯುದಾಗಾರದಲ್ಲಿ 9ನೇ ಟಕದ ಸುವರ್ಣ ಸಂಭ್ರಮದ ಪ್ರಯುಕ್ತ ಶುಕ್ರವಾರ ಆಚರಿಸಲಾದ ಪೂಜಾ ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳು.
ಶರಾವತಿ ವಿದ್ಯುದಾಗಾರದಲ್ಲಿ 9ನೇ ಟಕದ ಸುವರ್ಣ ಸಂಭ್ರಮದ ಪ್ರಯುಕ್ತ ಶುಕ್ರವಾರ ಆಚರಿಸಲಾದ ಪೂಜಾ ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಸುವರ್ಣ ಮಹೋತ್ಸವ ಆಚರಣೆ ನಮ್ಮ ಹೆಮ್ಮೆ
  • ಕೆಪಿಸಿ ಮುಖ್ಯ ಅಭಿಯಂತ ಬಿ.ಆನಂದಕುಮಾರ್​ ಹೇಳಿಕೆ
  • ಶರಾವತಿ 9ನೇ ಘಟಕಕ್ಕೆ 50 ವರ್ಷ
ಕಾರ್ಗಲ್​: ಶರಾವತಿ ಜಲವಿದ್ಯುತ್​ ಯೋಜನೆಯ 9ನೇ ಘಟಕವು (ಯೂನಿಟ್​ 9) ಯಶಸ್ವಿಯಾಗಿ 50ವರ್ಷಗಳ ನಿರಂತರ ಸೇವೆ ಪೂರೈಸಿ ಸುವರ್ಣ ಮಹೋತ್ಸವದ ಮೈಲಿಗಲ್ಲನ್ನು ತಲುಪಿರುವುದು ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ಸಂಗತಿ ಎಂದು ಶರಾವತಿ ಯೋಜನಾ ಪ್ರದೇಶದ ಕೆಪಿಸಿ ಚಾಲನಾ ಮತ್ತು ಪಾಲನಾ ವಿಭಾಗದ ಮುಖ್ಯ ಅಭಿಯಂತ ಬಿ.ಆನಂದಕುಮಾರ್​ ತಿಳಿಸಿದರು.
ಇಲ್ಲಿನ ಶರಾವತಿ ವಿದ್ಯುದಾಗಾರ (ಎಬಿ ಸೆಟ್​)ದಲ್ಲಿ ಆಯೋಜಿಸಿದ್ದ ಸುವರ್ಣ ಸಂಭ್ರಮ ಆಚರಣೆಯಲ್ಲಿ ಮಾತನಾಡಿದ ಅವರು, 1976ರ ಆ.27ರಂದು 9ನೇ ಟಕ ಆರಂಭವಾಗಿತ್ತು. ನಿರಂತರವಾಗಿ ಐವತ್ತು ವರ್ಷಗಳ ಕಾಲ ರಾಜ್ಯಕ್ಕೆ ಬೆಳಕು ನೀಡುವ ಕೆಲಸ ಮಾಡಿದ್ದು, ಸುವರ್ಣ ಸಂಭ್ರಮಕ್ಕೆ ನಾವುಗಳು ಸಾಯಾಗಿದ್ದೇವೆ ಎಂದು ಹೇಳಿದರು.
ಕೆಪಿಸಿ ಆಡಳಿತ ಮಂಡಳಿ ನಿರ್ದೇಶಕ ಕೆ.ವೀರೇಂದ್ರ ಮಾತನಾಡಿ, ಶರಾವತಿ ವಿದ್ಯುದಾಗಾರದ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಆರಂಭದಿಂದ ಇಂದಿನವರೆಗೂ ಯಾವುದೇ ಹೊರಗುತ್ತಿಗೆ ಆಸರೆಯಿಲ್ಲದೆ, ಕೇವಲ ನಮ್ಮದೇ ಸಂಸ್ಥೆಯ ಉದ್ಯೋಗಿಗಳ ದತೆಯಿಂದಲೆ ಈ ಸಾಧನೆ ಸಾಧ್ಯವಾಗಿದೆ. ನಿಷ್ಠಾವಂತ ಕಾರ್ಮಿಕರು, ಅಭಿಯಂತರು, ಹಗಲಿರುಳೆನ್ನದೆ, ಕಠಿಣ ಪರಿಸ್ಥಿತಿಗಳಲ್ಲೂ ಕಾರ್ಯನಿರ್ವಹಿಸಿದ ಎಲ್ಲರ ಶ್ರಮವೇ ರಾಜ್ಯಕ್ಕೆ ಈ 50 ವರ್ಷಗಳ ನಿರಂತರ ಬೆಳಕಿಗೆ ಮೂಲ ಕಾರಣ ಎಂದು ಹೇಳಿದರು. ನಮ್ಮದೇ ಸ್ವಂತ ಉದ್ಯೋಗಿಗಳ ಸಾಮರ್ಥ್ಯದ ಮೇಲೆ ನಿರ್ಮಾಣವಾದ ಈ 50 ವರ್ಷಗಳ ಯಶಸ್ಸು, ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಜೋಗ ಸಮಿತಿ ಚೇರ್ಮನ್​ ಮೊಹಮ್ಮದ್​ ಸದ್ದೂರ್​, ಅಧೀಕ ಅಭಿಯಂತ ಜಯಲಲಿತಾ, ಪ್ರಮುಖರಾದ ಕೇಶವೇಗೌಡ, ಗಣೇಶ್​, ವಿನಾಯಕ್​, ನಜೀರ್​, ಸಿದ್ಧೇಶ್​, ವಿಜಯಲ$್ಮ, ಗಿರೀಶ್​, ಮುತ್ತಣ್ಣ, ನಾಗಭೂಷಣ್​, ಅನಂತ್​ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net